ಕೊಲ್ಹಾಪುರ(ಮಹಾರಾಷ್ಟ್ರ):ನಗರ, ಪಾಲಿಕೆಗಳ ನೀರು ಸರಬರಾಜು ಅಂದರೆ ಆಗಾಗ ನೀರು ಸೋರಿಕೆ, ಪೈಪ್ ಲೈನ್ ಒಡೆದು ಹೋಗುವುದು ಕಾಮನ್. ಮಹಾರಾಷ್ಟ್ರದ ಕೊಲ್ಹಾಪುರದಲ್ಲೂ ಇಂತಹುದ್ದೇ ಘಟನೆ ನಡೆದಿದೆ. ಇಲ್ಲಿನ ಕೊಲ್ಹಾಪುರ ನಗರಕ್ಕೆ ನೀರು ಸರಬರಾಜು ಮಾಡುವ ಬಾಳಿಂಗ ಕೇಂದ್ರದಲ್ಲಿ ಪೈಪ್‌ಲೈನ್ ಒಡೆದಿದೆ.
ಪರಿಣಾಮ ನೀರಿನ ಪೈಪ್ ಲೈನ್ ಒಡೆದು 35 ಅಡಿಯವರೆಗೂ ನೀರು ಚಿಮ್ಮುತ್ತಿದೆ. ಭಾರಿ ಪ್ರಮಾಣದಲ್ಲಿ ನೀರು ಸೋರಿಕೆ ಆಗುತ್ತಿರುವುದರಿಂದ ನೀರಿನ ಪೈಪ್‌ಲೈನ್ ಹಾದು ಹೋಗಿರುವ ಬದಿಯಲ್ಲಿರು ಹೊಲಗಳಿಗೆ ನೀರು ನುಗ್ಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೈಪ್‌ಲೈನ್ ಒಡೆದು 35 ಅಡಿ ಎತ್ತರಕ್ಕೆ ಜಿಗಿಯುತ್ತಿರುವ ನೀರು ಪೈಪ್‌ಲೈನ್ ಸುತ್ತಲಿನ ಹೊಲಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಳೆದ ಹಲವು ದಿನಗಳಿಂದ ನಗರದ ನಿವಾಸಿಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಮತ್ತೊಂದೆಡೆ, ಈ ಪೈಪ್‌ಲೈನ್‌ನ ಸೋರಿಕೆಯಾಗುತ್ತಿದೆ ಇದರಿಂದ ಕೊಲ್ಹಾಪುರದ ಜನರ ನೀರಿನ ಅಭಾವವನ್ನೂ ಎದುರಿಸುತ್ತಿದ್ದಾರೆ.
ಇದನ್ನು ಓದಿ:ಶ್ರೀಲಂಕಾದಲ್ಲಿ ಹಿಂಸಾಚಾರ: ಮಂಗಳೂರು, ತಮಿಳುನಾಡು ಗಡಿಯಲ್ಲಿ ಹೆಚ್ಚಿನ ಭದ್ರತೆ