ಜೆಮ್ಶೆಡ್ಪುರ(ಜಾರ್ಖಂಡ್): ರಾಜ್ಯದ ಜನತೆಗೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ನೀಡಲಾಗುವುದು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ರಾಜ್ಯದಲ್ಲಿರುವ ಪ್ರಮುಖ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜ್ ಎಂಜಿಎಂನ ಚಿತ್ರಣ ಮಾತ್ರ ವಿಭಿನ್ನವಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಆಸ್ಪತ್ರೆಯ ಬಹುತೇಕ ವಾರ್ಡ್ನೊಳಗೆ ನೀರು ನುಗ್ಗಿದೆ. ಹೀಗಾಗಿ, ರೋಗಿಗಳು ಸಂಕಷ್ಟ ಅನುಭವಿಸುವಂತಾಗಿದೆ. ತಾವು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬೆಡ್ನಿಂದ ಕಳೆಗಡೆ ಕಾಲಿಡಲು ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವಾರ್ಡ್ನೊಳಗೆ ನೀರು ನುಗ್ಗಿರುವ ಕಾರಣ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಕೆಲಸ ಮಾಡ್ತಿದ್ದವರು ನೀರು ಹೊರಹಾಕುವ ಕೆಲಸದಲ್ಲಿ ಮಗ್ನರಾಗಿರುವುದು ಕಂಡು ಬಂದಿದೆ. ಜೊತೆಗೆ ರೋಗಿಗಳು ಅನೇಕ ಗಂಟೆಗಳ ಕಾಲ ಬೆಡ್ ಮೇಲೆ ಕುಳಿತುಕೊಳ್ಳುವಂತೆ ಸೂಚನೆ ನೀಡಿರುವ ಘಟನೆ ಸಹ ನಡೆದಿದೆ.