ಚಂಡೀಗಡ: ರೈತರು ಚಂಡೀಗಢ- ಮೊಹಾಲಿ ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಭೇದಿಸಿ ಒಳ ನುಗ್ಗಿಲು ಯತ್ನಿಸಿದ್ದು ಈ ವೇಳೆ ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಇದೇ ವೇಳೆ ಪ್ರತಿಭಟನಾ ನಿರತ ರೈತರೊಬ್ಬರು ನೀರಿನ ಫಿರಂಗಿ ವಾಹನದ ಮೇಲೆ ಹತ್ತಿದರು.
ಚಂಡೀಗಢ: ರೈತರನ್ನು ಚದುರಿಸಲು ಜಲಫಿರಂಗಿ ಪ್ರಯೋಗ - ರೈತರ ಪ್ರತಿಭಟನೆ
ರಾಜ್ಯಪಾಲರಿಗೆ ಜ್ಞಾಪಕ ಪತ್ರವನ್ನು ಹಸ್ತಾಂತರಿಸಲು ರೈತರು ಕಾಲ್ನಡಿಗೆಯಲ್ಲಿ ಸಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರೈತರನ್ನು ಚದುರಿಸಲು ಚಂಡೀಗಢ- ಮೊಹಾಲಿ ಗಡಿಯಲ್ಲಿ ಪೊಲೀಸರು ಜಲ ಫಿರಂಗಿ ಬಳಕೆ ಮಾಡಿದ್ದಾರೆ.

ರೈತರನ್ನು ಚದುರಿಸಲು ಜಲಫಿರಂಗಿ ಬಳಕೆ
ರೈತರನ್ನು ಚದುರಿಸಲು ಜಲಫಿರಂಗಿ ಬಳಕೆ
ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧದ ಏಳು ತಿಂಗಳ ಆಂದೋಲನ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ರೈತರು ರಾಜ್ಯಪಾಲರ ಮನೆಗೆ ಮೆರವಣಿಗೆ ನಡೆಸಿ ಜ್ಞಾಪಕ ಪತ್ರವನ್ನು ಸಲ್ಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಚಂಡೀಗಢದಲ್ಲಿ ಭಾರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಪಾಲರಿಗೆ ಜ್ಞಾಪಕ ಪತ್ರ ಹಸ್ತಾಂತರಿಸಲು ರೈತರು ಕಾಲ್ನಡಿಗೆಯಲ್ಲಿ ಸಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರೈತರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಬಳಕೆ ಮಾಡಿದ್ದಾರೆ.