ಲೇಹ್(ಲಡಾಖ್):75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಗೂ ಗಾಂಧಿ ಜಯಂತಿ ಆಚರಣೆ ಅಂಗವಾಗಿ ಲಡಾಖ್ನ ಲೇಹ್ನಲ್ಲಿ ವಿಶ್ವದ ಅತಿದೊಡ್ಡ ಭಾರತದ ತ್ರಿವರ್ಣ ಧ್ವಜವನ್ನು ಇಂದು ಅನಾವರಣಗೊಳಿಸಲಾಗಿದೆ.
ಬರೋಬ್ಬರಿ 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಇದಾಗಿದ್ದು, ಮುಂಬೈನಲ್ಲಿ ತಯಾರಿಸಲಾಗಿದೆ. 225 ಅಡಿ ಉದ್ದ ಹಾಗೂ 150 ಅಡಿ ಅಗಲ ಇರುವ ಈ ತ್ರಿವರ್ಣ ಧ್ವಜ ಲೇಹ್ನಲ್ಲಿ 2 ಸಾವಿರ ಅಡಿ ಎತ್ತರದ ಜಾಗದಲ್ಲಿ ಸ್ಥಾಪನೆಗೊಂಡಿದೆ. ಇದಕ್ಕಾಗಿ ಭಾರತೀಯ ಸೇನೆಯ 57 ಎಂಜಿನಿಯರ್ಗಳು ಹಾಗೂ ರೆಜಿಮೆಂಟ್ನ 150 ಸೈನಿಕರು ಸುಮಾರು 2 ಗಂಟೆಗಳ ಕಾಲ ಹೊತ್ತು ಬೆಟ್ಟದ ತುದಿಗೆ ತೆಗೆದುಕೊಂಡು ಹೋಗಿದ್ದಾರೆ.