ಕರ್ನಾಟಕ

karnataka

ETV Bharat / bharat

Video: 12 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ಸಿಲುಕಿದ್ದ ನಾಲ್ವರನ್ನು ರಕ್ಷಿಸಿದ ITBP - ITBP personnel rescue 4 people from 12,000 feet in Uttarakhand

ಗಿಡಮೂಲಿಕೆ ತರಲು ಹೋಗಿ 12 ಸಾವಿರ ಅಡಿಗಳ ಎತ್ತರದಲ್ಲಿ ಸಿಲುಕಿದ್ದ ನಾಲ್ವರನ್ನು ಐಟಿಬಿಪಿ ಸಿಬ್ಬಂದಿ ರಕ್ಷಿಸಿದ್ದಾರೆ.

ITBP
ITBP

By

Published : Sep 2, 2021, 1:52 PM IST

Updated : Sep 2, 2021, 2:26 PM IST

ಮಿಲಮ್ (ಉತ್ತರಾಖಂಡ): ಉಕ್ಕಿ ಹರಿಯುತ್ತಿರುವ ನದಿ ದಾಟಲಾರದೆ 12 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಸಿಲುಕಿದ್ದ ನಾಲ್ವರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ರಕ್ಷಿಸಿದ್ದಾರೆ.

12 ಸಾವಿರ ಅಡಿಗಳ ಮೇಲೆ ಸಿಲುಕಿದ್ದ ನಾಲ್ವರನ್ನು ರಕ್ಷಿಸಿದ ITBP

ಐಟಿಬಿಪಿಯ 14 ನೇ ಬೆಟಾಲಿಯನ್​ ಪಡೆಗಳು ಬುಧವಾರ ಎರಡು ಗಂಟೆ ಸುಮಾರಿಗೆ ಮಿಲಂ ಗ್ರಾಮದ ಮೂವರು ಪುರುಷರು ಮತ್ತು ಓರ್ವ ಮಹಿಳೆಯನ್ನು ರಕ್ಷಿಸಿವೆ.

ಈ ಕುರಿತು ಮಾಹಿತಿ ನೀಡಿರುವ ಐಟಿಬಿಪಿ ವಕ್ತಾರ ವಿವೇಕ್ ಪಾಂಡೆ, ಗಿಡಮೂಲಿಕೆಗಳನ್ನು ತರಲು ಹೋಗಿದ್ದ ನಾಲ್ವರು, ಉಕ್ಕಿ ಹರಿಯುವ ನದಿಯನ್ನು ದಾಟಲಾರದೆ ಅಂದಾಜು 7 ಗಂಟೆಗಳ ಕಾಲ ಅಲ್ಲಿಯೇ ಸಿಲುಕಿದ್ದರು. ಐಟಿಬಿಪಿಯ ಸೇನೆ ಹತ್ತಿರದಲ್ಲಿಯೇ ಇದ್ದುದರಿಂದ ನಾಲ್ವರನ್ನು ರಕ್ಷಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸೋಂ: ಈವರೆಗೆ 5 ಮಂದಿ ಬಲಿ

Last Updated : Sep 2, 2021, 2:26 PM IST

ABOUT THE AUTHOR

...view details