ಕರ್ನಾಟಕ

karnataka

ETV Bharat / bharat

Video: ಯಮುನಾ ನದಿಗೆ ಹಾರಿ Facebook ಖ್ಯಾತಿಯ ಹಿಮಾಂಶಿ ಗಾಂಧಿ Suicide! - ಯಮುನಾ ನದಿಗೆ ಹಾರಿ ಫೇಸ್‌ಬುಕ್ ಖ್ಯಾತಿಯ ಹಿಮಾಂಶಿ ಗಾಂಧಿ ಆತ್ಮಹತ್ಯೆ

ಹಿಮಾಂಶಿ ಗಾಂಧಿ ಜೂನ್ 24ರಂದು ಮಧ್ಯಾಹ್ನ 3 ಗಂಟೆಗೆ ಸಿಗ್ನೇಚರ್ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಯ ಹಿಂದಿನ ಕಾರಣ ಇನ್ನೂ ಬಹಿರಂಗವಾಗಿಲ್ಲ.

live video
live video

By

Published : Jun 29, 2021, 2:41 PM IST

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತರಾಗಿರುವ ಹಿಮಾಂಶಿ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ವಿಡಿಯೋ ಹೊರಬಿದ್ದಿದೆ. CCTV ದೃಶ್ಯಾವಳಿಗಳಲ್ಲಿ ಹಿಮಾಂಶಿ ಗಾಂಧಿ ಸಿಗ್ನೇಚರ್ ಸೇತುವೆಯಿಂದ ಜಿಗಿಯುತ್ತಿರುವುದನ್ನು ಕಾಣಬಹುದಾಗಿದೆ.

ಹಿಮಾಂಶಿ ಜೂನ್ 24ರಂದು ಮಧ್ಯಾಹ್ನ 3 ಗಂಟೆಗೆ ಸಿಗ್ನೇಚರ್ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಯ ಹಿಂದಿನ ಕಾರಣ ಇನ್ನೂ ಕೂಡಾ ಬಹಿರಂಗವಾಗಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.

ಹಿಮಾಂಶಿ ಗಾಂಧಿ ಆತ್ಮಹತ್ಯೆ

ಫೇಸ್‌ಬುಕ್ ಖ್ಯಾತಿಯ ಹಿಮಾಂಶಿ ಗಾಂಧಿ ಸಿಗ್ನೇಚರ್ ಸೇತುವೆಯಿಂದ ಯಮುನಾ ನದಿಗೆ ಹಾರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಜೂನ್ 24ರಂದು ದೆಹಲಿಯ ಬುರಾರಿ ಪೊಲೀಸ್ ಠಾಣೆಯಲ್ಲಿ ಹಿಮಾಂಶಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಲಾಯಿತು. ನಂತರ ಜೂನ್ 25ರಂದು ಮಧ್ಯಾಹ್ನ ಯಮುನಾ ನದಿಯ ಕುಡೆಶಿಯಾ ಘಾಟ್‌ನಲ್ಲಿ ಸುಮಾರು ಒಂದು ಗಂಟೆಗೆ ಮೃತದೇಹ ಪತ್ತೆಯಾಗಿತ್ತು. ಬುರಾರಿ ಪೊಲೀಸರು ಅನೇಕ ಪರಿಚಯಸ್ಥರನ್ನು ಮತ್ತು ಸ್ನೇಹಿತರನ್ನು ವಿಚಾರಣೆ ಮಾಡುವಲ್ಲಿ ನಿರತವಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details