ಕರ್ನಾಟಕ

karnataka

ETV Bharat / bharat

ಮೃತ್ಯುವಿಗೆ ಹತ್ತಿರವಾದ ಆ ಕ್ಷಣ..! ವರಪ್ರದ ಬೋಟ್ ಮುಳುಗುವ ಕೆಲವೇ ಕ್ಷಣಗಳ ಮುನ್ನ ಚಿತ್ರಿಸಿದ ವಿಡಿಯೋ.. - ವರಪ್ರದ ಟಗ್ ಬೋಟ್

ಚಂಡಮಾರುತ ತೌಕ್ತೆಯ ರುದ್ರನರ್ತನಕ್ಕೆ ಕೆಲವು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ P-305 ಎಂಬ ಹೆಸರಿನ ಬಾರ್ಜ್‌​ ಕೊಚ್ಚಿ ಹೋಗಿತ್ತು. ಈ ವೇಳೆ ಅದ್ರಲ್ಲಿ ಸಿಬ್ಬಂದಿಯೂ ಸೇರಿ ಒಟ್ಟು 274 ಜನರಿದ್ದರು. ಸತತ ಆರು ದಿನಗಳ ಕಾಲ ನೌಕಾಪಡೆ ಹಾಗೂ ವಾಯುಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ನಡೆಸಿ, ಸಮುದ್ರದಲ್ಲಿ ಸಿಲುಕಿದ್ದ 188 ಮಂದಿಯನ್ನು ರಕ್ಷಿಸಿ, 70 ಶವಗಳನ್ನು ಹೊರ ತೆಗೆದಿದ್ದರು. ಇದೀಗ ದುರ್ಘಟನೆಗೆ ತುತ್ತಾದ ಇನ್ನೊಂದು ಬೋಟ್‌ ವರಪ್ರದ ಮುಳುಗುವುದಕ್ಕೂ ಸ್ವಲ್ಪ ಹೊತ್ತಿಗೆ ಮುಂಚೆ ತೆಗೆದಿರುವ ವಿಡಿಯೋ ದೊರೆತಿದ್ದು ಭಯ ಹುಟ್ಟಿಸುವಂತಿದೆ.

ಮೃತ್ಯುವಿಗೆ ಹತ್ತಿರವಾದ ಆ ಕ್ಷಣ
ಮೃತ್ಯುವಿಗೆ ಹತ್ತಿರವಾದ ಆ ಕ್ಷಣ

By

Published : May 26, 2021, 9:04 AM IST

Updated : May 26, 2021, 10:00 AM IST

ಮುಂಬೈ: ಸುಮಾರು ಒಂದು ವಾರದ ಹಿಂದೆ ಅಂದರೆ ಮೇ 17ರಂದು 'ತೌಕ್ತೆ' ಚಂಡಮಾರುತದ ಆರ್ಭಟಕ್ಕೆ ಮುಂಬೈ ತಟದ ಅರಬ್ಬಿ ಸಮುದ್ರದಲ್ಲಿ ವರಪ್ರದಾ ಬೋಟ್​ ಕೊಚ್ಚಿ ಹೋಗಿತ್ತು. ಈ ಬೋಟ್​ನಲ್ಲಿ 13 ಜನರಿದ್ದರು. ಆದ್ರೆ ಬದುಕುಳಿದಿದ್ದು ಕೇವಲ 11 ಮಂದಿ ಮಾತ್ರ. ಈ ದುರಂತ ನಡೆಯುವುದಕ್ಕೂ ಮುನ್ನ ಚಿತ್ರಿಸಿದ ವಿಡಿಯೋ ಇಲ್ಲಿದೆ ನೋಡಿ..

ವರಪ್ರದ ಟಗ್ ಬೋಟ್ ಮುಳುಗುವ ಕೆಲವೇ ಕ್ಷಣಗಳ ಮುನ್ನ ಚಿತ್ರಿಸಿದ ವಿಡಿಯೋ

ಸಮುದ್ರದ ಅಲೆಗಳ ಅಬ್ಬರಕ್ಕೆ ಬೋಟ್​​ನ ಕೆಲವು ಭಾಗಗಳು ಹೇಗೆ ಮುರಿದು ಹೋದವು ಎನ್ನುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವರಪ್ರದ ಟಗ್ ಬೋಟ್ ಮುಳುಗುವ ಸ್ವಲ್ಪ ಸಮಯದ ಮೊದಲು ವ್ಯಕ್ತಿಯೊಬ್ಬರು ಚಿತ್ರೀಕರಿಸಿದ ವಿಡಿಯೋ ಇದು ಎಂಬ ಮಾಹಿತಿ ದೊರೆತಿದೆ. ಈ ವೇಳೆ 22 ವರ್ಷದ ಸೂರಜ್ ಚೌಹಾನ್ ಎಂಬಾತ ದೈತ್ಯ ಅಲೆಗಳು ಟಗ್ ಬೋಟ್‌ನ ಮರದ ಚೌಕಟ್ಟನ್ನು ಮುರಿಯುವುದನ್ನು ನೋಡುತ್ತಿದ್ದಾನೆ.

ಮೇ 17 ರಂದು ಮಹಾರಾಷ್ಟ್ರದ ಕರಾವಳಿಯಲ್ಲಿ ವರಪ್ರದ ಟಗ್ ಬೋಟ್ ಮುಳುಗಿದಾಗ ಟಗ್ ಬೋಟ್​​ನಲ್ಲಿ 13 ಜನರಿದ್ದರು. ಇದರಲ್ಲಿ ಕೇವಲ ಇಬ್ಬರು ಮಾತ್ರ ಬದುಕುಳಿದಿದ್ದರು. ಇಬ್ಬರು ನೀರಿಗೆ ಹಾರಿದ್ದು ನೌಕಾಪಡೆ ರಕ್ಷಿಸಿತ್ತು.

Last Updated : May 26, 2021, 10:00 AM IST

ABOUT THE AUTHOR

...view details