ಗುಂಟೂರು (ಆಂಧ್ರಪ್ರದೇಶ): ಮರು ಬಳಕೆ ಸಾಧನಗಳನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ 14 ಅಡಿ ಎತ್ತರದ ಪ್ರತಿಮೆಯನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿದೆ.
ತೆನಾಲಿ ಕುಶಲಕರ್ಮಿಗಳ ಕೈಚಳಕದಲ್ಲಿ ನಿರ್ಮಾಣವಾದ 14 ಅಡಿ ಎತ್ತರದ ಮೋದಿ ಪ್ರತಿಮೆ: VIDEO - 14-feet statue of Prime Minister Narendra Modi
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದ ಕುಶಲಕರ್ಮಿಗಳು ಪ್ರಧಾನಿ ನರೇಂದ್ರ ಮೋದಿಯವರ 14 ಅಡಿ ಎತ್ತರದ ಕಬ್ಬಿಣದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ.
![ತೆನಾಲಿ ಕುಶಲಕರ್ಮಿಗಳ ಕೈಚಳಕದಲ್ಲಿ ನಿರ್ಮಾಣವಾದ 14 ಅಡಿ ಎತ್ತರದ ಮೋದಿ ಪ್ರತಿಮೆ: VIDEO ಮೋದಿ ಪ್ರತಿಮೆ](https://etvbharatimages.akamaized.net/etvbharat/prod-images/768-512-13067917-thumbnail-3x2-lek.jpg)
PM Modi
ತೆನಾಲಿ ಪಟ್ಟಣದ ವೆಂಕಟೇಶ್ವರ ರಾವ್ ಮತ್ತು ಅವರ ಮಗನ ನೇತೃತ್ವದಲ್ಲಿ 10-15 ಕೆಲಸಗಾರರು ಸುಮಾರು 2 ತಿಂಗಳ ಕಾಲ ಕಬ್ಬಿಣದ ಪ್ರತಿಮೆ ನಿರ್ಮಾಣ ಕೆಲಸ ಮಾಡಿದ್ದಾರೆ. ಇನ್ನು ಈ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ವೆಂಕಟೇಶ್ವರ ರಾವ್ ತಿಳಿಸಿದ್ದು, ಈ ಕುರಿತಾದ ಒಂದು ವಿಡಿಯೋ ಝಲಕ್ ಇಲ್ಲಿದೆ ನೋಡಿ.
14 ಅಡಿ ಎತ್ತರದ ಮೋದಿ ಪ್ರತಿಮೆ