ಜಮ್ಮು-ಕಾಶ್ಮೀರ: ರಾಜಕಾರಣದಲ್ಲಿ ಬಿಜೆಪಿ ಪಕ್ಷ ಧರ್ಮವನ್ನು ಬೆಸೆದುಕೊಂಡಿದೆ ಎಂದು ಆಡಳಿತಾರೂಢ ಬಿಜೆಪಿಯನ್ನು ಸದಾ ಟೀಕಿಸುವ ಕಾಂಗ್ರೆಸ್, ರಾಜಕೀಯಕ್ಕಾಗಿ ಇದೀಗ ಬಿಜೆಪಿ ಹಾದಿ ಹಿಡಿದಿದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ. ಜಮ್ಮು-ಕಾಶ್ಮೀರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ 'ಜೈ ಮಾತಾಜಿ' ಎಂಬ ಘೋಷಣೆ ಕೂಗುವಂತೆ ರಾಹುಲ್ ಕರೆ ನೀಡಿದ್ದೇ ಇದಕ್ಕೆ ಕಾರಣ.
'ಜೈ ಮಾತಾಜಿ ಘೋಷಣೆ ಕೂಗಿ..': ಜಮ್ಮುಕಾಶ್ಮೀರದಲ್ಲಿ 'ಕೈ' ಕಾರ್ಯಕರ್ತರಿಗೆ ಕರೆ ನೀಡಿದ ರಾಹುಲ್- ವಿಡಿಯೋ - ಜಮ್ಮು-ಕಾಶ್ಮೀರ
ಎರಡು ದಿನಗಳ ಜಮ್ಮುಕಾಶ್ಮೀರ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮವೊಂದರಲ್ಲಿ ಜೈ ಮಾತಾ ಎಂಬ ಘೋಷಣೆ ಕೂಗುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಜೈ ಮಾತಾಜಿ ಘೋಷಣೆ ಕೂಗಿ; ಜಮ್ಮು-ಕಾಶ್ಮೀರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಕರೆ - ವಿಡಿಯೋ
ಕೇಂದ್ರಾಡಳಿತ ಪ್ರದೇಶದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಕಾರ್ಯಕ್ರಮವೊಂದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಜೈ ಮಾತಾ ಎಂದು ಘೋಷಣೆ ಕೂಗುವಂತೆ ಸೂಚಿಸಿದರು. ಮುಗುಳ್ನಗೆಯೊಂದಿಗೆ ಈ ರೀತಿ ತಿಳಿಸಿದ ರಾಹುಲ್ ಕರೆಯನ್ನು ಅಲ್ಲಿ ನೆರೆದಿದ್ದವರು ಗಂಭೀರವಾಗಿ ಪರಿಗಣಿಸಲಿಲ್ಲ. ಆಗ ಮತ್ತೊಮ್ಮೆ ಜೈ ಮಾತಾ ಅಂತ ಹೇಳಿ.. ಹೇಳಿ ಎಂದು ಅವರು ಪುರುಚ್ಚರಿಸಿದರು. ಆಗ ಸಭಿಕರು ಜೈ ಮಾತಾ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ರಾಹುಲ್ ಗಾಂಧಿ ನಿನ್ನೆ ಇಲ್ಲಿನ ಕತ್ರಾದಿಂದ ವೈಷ್ಣೋದೇವಿ ದೇಗುಲಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು.