ಗಾಜಿಯಾಬಾದ್(ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ವೈರಸ್ನಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿನ ಪೊಲೀಸರು ಹೊಸ ಮಾರ್ಗ ಕಂಡು ಹಿಡಿದುಕೊಂಡಿದ್ದಾರೆ.
Watch: ಪ್ರೆಶರ್ ಕುಕ್ಕರ್ನಿಂದ ಹೊರ ಬರುವ ಉಗಿ ಸೇವಿಸುವ ಪೊಲೀಸರು... ಕಾರಣ!? - ಉತ್ತರ ಪ್ರದೇಶ ಪೊಲೀಸರು
ಉತ್ತರ ಪ್ರದೇಶದ ಪೊಲೀಸರು ಪ್ರೆಶರ್ ಕುಕ್ಕರ್ನಿಂದ ಹೊರಬರುವ ಉಗಿ ಸೇವನೆ ಮಾಡುತ್ತಿದ್ದು, ಇದರಿಂದ ಕೊರೊನಾ ವೈರಸ್ ತಮ್ಮ ದೇಹ ಸೇರಿಕೊಳ್ಳುವುದಿಲ್ಲ ಎಂಬುದು ಇವರ ವಾದವಾಗಿದೆ.
Policemen inhale steam
ಉತ್ತರ ಪ್ರದೇಶದ ಘಾವಿಯಾಬಾದ್ನ ಸಿಹಾನಿ ಗೇಟ್ ಪೊಲೀಸ್ ಅಧಿಕಾರಿಗಳು ಕರ್ತವ್ಯದಲ್ಲಿದ್ದಾಗ ಉಸಿರಾಡಲು ಹೊಸ ವಿಧಾನ ಕಂಡುಹಿಡಿದಿದ್ದಾರೆ. ಪ್ರೆಶರ್ ಕುಕ್ಕರ್ನ ನಳಿಕೆಗೆ ಮರು ಹೊಂದಿಸಲಾಗಿರುವ ಪೈಪಿಂಗ್ನಿಂದ ಹೊರ ಬರುವ ಉಗಿ ಉಸಿರಾಡುತ್ತಿದ್ದಾರೆ. ಇದರಿಂದ ಕೊರೊನಾ ತಮ್ಮ ದೇಹದೊಳಗೆ ಹೋಗುವುದಿಲ್ಲ ಎಂಬುದು ಇವರ ನಂಬಿಕೆಯಾಗಿದೆ.
ಕಳೆದ ಕೆಲ ದಿನಗಳಿಂದ ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಹಗಲು-ರಾತ್ರಿ ಲೆಕ್ಕ ಹಾಕಿಕೊಳ್ಳದೆ ಡ್ಯೂಟಿ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.