ನವದೆಹಲಿ: ಭಾರತದ ಟೋಕಿಯೋ ಒಲಿಂಪಿಕ್ಸ್ ತಾರೆಗಳ ಜೊತೆಗಿನ ಉಪಹಾರ ಹಾಗೂ ಸಂವಾದ ನಡೆಸಿದ್ದ ವಿಡಿಯೋ ಹಾಗೂ ಚಿತ್ರಗಳನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಬಿಲ್ಲುಗಾರ ದೀಪಿಕಾ ಕುಮಾರಿ, ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾಮ್, ಫೆನ್ಸರ್ ಭವಾನಿ ದೇವಿ ಮತ್ತು ಇತರರೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದರು.
ಒಲಿಂಪಿಕ್ಸ್ನಲ್ಲಿ ಕಂಚು ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಜೊತೆ ಐಸ್ ಕ್ರೀಮ್ ಸವಿದ ಮೋದಿ, ಅವರಿಗೆ ನೀಡಿದ್ದ ಭರವಸೆ ಈಡೇರಿಸಿದ್ದರು. ಜಾವೆಲಿನ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದ ನೀರಜ್ ಚೋಪ್ರಾ ಬಹಳ ಇಷ್ಟವಾದ ಚೂರ್ಮಾ ಖಾದ್ಯವನ್ನು ಉಣಬಡಿಸಿದ ಪ್ರಧಾನಿ ಮೋದಿ, ಅವರೊಂದಿಗೂ ಉತ್ತಮ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಚರ್ಚೆ ನಡೆಸಿದ್ದರು.