ಗ್ಲಾಸ್ಗೋ:ಹವಾಮಾನ ಬದಲಾವಣೆ ಕುರಿತ ‘ಸಿಒಪಿ26 ವಿಶ್ವ ನಾಯಕರ ಸಮ್ಮೇಳನ’ದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಭಾರತಕ್ಕೆ ವಾಪಸಾಗುವ ಮೊದಲು ಸ್ಕಾಟ್ಲೆಂಡ್ನಲ್ಲಿರುವ ಭಾರತೀಯ ಸಮುದಾಯವನ್ನು ಬೇಟಿಯಾಗಿದ್ದು, ಅವರೊಂದಿಗೆ ಡ್ರಮ್ ಬಾರಿಸಿ ಸಂಭ್ರಮಿಸಿದ್ದಾರೆ.
ಭಾರತೀಯ ಸಾಂಪ್ರದಾಯಿಕ ಉಡುಪು ಮತ್ತು ಟರ್ಬನ್ ಧರಿಸಿದ್ದ ಭಾರತೀಯ ಸಮುದಾಯದ ಮಂದಿ ಮೋದಿಗೆ ವಿದಾಯ ಹೇಳಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಸಹ ಡ್ರಮ್ ಬಾರಿಸಿ ಸಂತಸದಿಂದ ಅವರಿಗೆ ನಮಸ್ಕರಿಸಿ ಅಲ್ಲಿಂದ ತೆರಳಿದ್ದಾರೆ.
ಗ್ಲಾಸ್ಕೋದಲ್ಲಿ ಭಾರತೀಯರ ಜೊತೆ ಡ್ರಮ್ ಬಾರಿಸಿ ಸಂಭ್ರಮ ಈ ವೇಳೆ ಅಲ್ಲಿದ್ದ ಹಲವರೊಂದಿಗೆ ಮೋದಿ ಸಂತಸ ಹಂಚಿಕೊಂಡರಲ್ಲದೆ ಕೈಕುಲುಕಿ ನೆರೆದಿದ್ದವರಿಗೆ ಶುಭಕೋರಿದರು. ಇದಕ್ಕೂ ಮೊದಲು ಶೃಂಗಸಭೆಯಲ್ಲಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಮತ್ತು ಐರೋಪ್ಯ ದೇಶಗಳು 2050ರ ವೇಳೆಗೆ ನೆಟ್ ಝೀರೊ ಗುರಿಯನ್ನು ತಲುಪುವುದಾಗಿ ಹೇಳಿದ್ದರೆ, ಚೀನಾವು 2060ಕ್ಕೆ ಈ ಗುರಿ ತಲುಪುವುದಾಗಿ ಹೇಳಿದೆ. ಭಾರತವು ಈ ಗುರಿ ತಲುಪಲು ಇನ್ನೂ 10 ವರ್ಷ ಹೆಚ್ಚುವರಿ ಸಮಯಾವಕಾಶ ತೆಗೆದುಕೊಳ್ಳಲಿದೆ ಎಂದಿದ್ದರು.
ಭಾರತವನ್ನು ಕಾರ್ಬನ್ ಮುಕ್ತ ದೇಶವನ್ನಾಗಿಸಲಾಗುವುದು ಎಂದು ಮೋದಿ ಹೇಳಿದ್ದರು. ಜಿ20 ಮತ್ತು ಕಾಪ್26 ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಮತ್ತು ಬ್ರಿಟನ್‌ಗೆ ತೆರಳಿದ್ದ ಪ್ರಧಾನಿ ಇದೀಗ ಭಾರತಕ್ಕೆ ಬಂದಿಳಿದಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಪ್ರಕಟ.. ನೀರಜ್ ಚೋಪ್ರಾಗೆ ಖೇಲ್ ರತ್ನ