ಜೈಪುರ (ರಾಜಸ್ಥಾನ): ರಾಜಸ್ಥಾನದ ಕೋವಿಡ್ -19 ಆರ್‌ಯುಎಚ್‌ಎಸ್ ಆಸ್ಪತ್ರೆಯಲ್ಲಿ ಬೆಡ್ ಅಭಾವ ಉಂಟಾಗಿದೆ.
ಆಸ್ಪತ್ರೆ ಕಾರಿಡಾರ್ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್ ಅಭಾವ ಉಂಟಾದ ಕಾರಣ ಕಾರಿಡಾರ್ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಧಿಕಾರಿಗಳು, ಆಸ್ಪತ್ರೆಯ ವರಾಂಡಾದಲ್ಲಿ ಐದನೇ ಮಹಡಿಯಿಂದ ಎಂಟನೇ ಮಹಡಿಯವರೆಗೆ ಹಾಸಿಗೆಗಳನ್ನು ವ್ಯವಸ್ಥೆ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಸಿಗೆಗಳು ಮತ್ತು ತೀವ್ರ ನಿಗಾ ಘಟಕಗಳು ಸಂಪೂರ್ಣವಾಗಿ ತುಂಬಿ ಹೋಗಿವೆ. ಸುಮಾರು 1,200 ಹಾಸಿಗೆಗಳು, 167 ವೆಂಟಿಲೇಟರ್‌ಗಳು, 250 ಐಸಿಯು ಹಾಸಿಗೆಗಳಿವೆ. ಆದರೆ, ಇತ್ತೀಚೆಗೆ ಕೋವಿಡ್ -19 ಪ್ರಕರಣಗಳಲ್ಲಿ ಉಂಟಾದ ಉಲ್ಬಣವು ಈ ಭೀಕರ ಪರಿಸ್ಥಿತಿಗೆ ಕಾರಣವಾಗಿದೆ.
ಓದಿ:ಕೊರೊನಾಗೆ ಒಂದೇ ಕುಟುಂಬದ ಐವರು ಬಲಿ: ಇದು ಮನಕಲಕುವ ಕಹಾನಿ