ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ಕಾರಿನಲ್ಲಿ ಭಾರೀ ಬೆಂಕಿ : ಪ್ರಾಣಾಪಾಯದಿಂದ ಪಾರಾದ ಯುವಕರು - ನವದೆಹಲಿ

ಬೆಂಕಿಯಿಂದಾಗಿ ಕಾರಿನ ಬಾನೆಟ್ ಸುಟ್ಟು ಹೋಗಿದೆ. ಇನ್ನು, ಘಟನೆ ನಡೆದಾಗ ಕಾರಿನಲ್ಲಿ ನಾಲ್ವರು ಯುವಕರು ಇದ್ದರು ಎನ್ನಲಾಗಿದೆ. ಆದರೂ ಅವರು ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಿದ್ದಾರೆ. ಈ ಯುವಕರು ರೋಹಿಣಿಯ ನಿವಾಸಿಗಳು ಎಂದು ಹೇಳಲಾಗಿದೆ..

ಪ್ರಾಣಾಪಾಯದಿಂದ ಪಾರಾದ ಯುವಕರು

By

Published : Aug 22, 2021, 10:25 PM IST

ನವದೆಹಲಿ: ಇಲ್ಲಿನ ಕೇಶವ್ ಪುರಂ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿಯೇ ಭಾರೀ ಬೆಂಕಿ ಕಾಣಿಸಿದೆ. ಘಟನೆಯ ನಂತರ ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿತು. ಮೂಲಗಳ ಪ್ರಕಾರ, ಕಾರು ಕೇಶವಪುರಂ ಮೆಟ್ರೋ ನಿಲ್ದಾಣದ ಬಳಿ ಇದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

ಬೆಂಕಿಯಿಂದಾಗಿ ಕಾರಿನ ಬಾನೆಟ್ ಸುಟ್ಟು ಹೋಗಿದೆ. ಇನ್ನು, ಘಟನೆ ನಡೆದಾಗ ಕಾರಿನಲ್ಲಿ ನಾಲ್ವರು ಯುವಕರು ಇದ್ದರು ಎನ್ನಲಾಗಿದೆ. ಆದರೂ ಅವರು ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಿದ್ದಾರೆ. ಈ ಯುವಕರು ರೋಹಿಣಿಯ ನಿವಾಸಿಗಳು ಎಂದು ಹೇಳಲಾಗಿದೆ.

ABOUT THE AUTHOR

...view details