ಕರ್ನಾಟಕ

karnataka

ETV Bharat / bharat

ಬಾಲಕಿಯನ್ನು ಬೆನ್ನಟ್ಟಿ ದಾಳಿ ಮಾಡಿದ ಬೀದಿ ನಾಯಿಗಳು.. ವಿಡಿಯೋ - ಬೀದಿ ನಾಯಿಗಳು

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ 11 ವರ್ಷದ ಬಾಲಕಿಯ ಮೇಲೆ ನಾಲ್ಕೈದು ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ಮಾಡಿವೆ.

watch-live-video-of-attack-on-girl-child-in-ghaziabad
11 ವರ್ಷದ ಬಾಲಕಿಯ ಬೆನ್ನಟ್ಟಿ ದಾಳಿ ಮಾಡಿದ ಬೀದಿ ನಾಯಿಗಳು.. ವಿಡಿಯೋ

By

Published : Nov 20, 2022, 6:08 PM IST

ನವದೆಹಲಿ/ಗಾಜಿಯಾಬಾದ್: ಬಾಲಕಿಯೊಬ್ಬಳನ್ನು ಬೀದಿ ನಾಯಿಗಳು ಬೆನ್ನಟ್ಟಿ ಕಚ್ಚಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ. ನಾಯಿಗಳ ದಾಳಿಯಿಂದ ಬಾಲಕಿ ಭಯದಿಂದ ಓಡಿ ಮನೆಯೊಳಗೆ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರಾಷ್ಟ್ರ ರಾಜಧಾನಿ ದೆಹಲಿ ಸಮೀಪದಲ್ಲೇ ಗಾಜಿಯಾಬಾದ್​ನಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿಷ್ಠಿತ ಕಾಲೋನಿಗಳಲ್ಲೂ ಬೀದಿ ನಾಯಿಗಳು ಲಗ್ಗೆ ಇಡುತ್ತಿವೆ. ಇಲ್ಲಿನ ವೈಶಾಲಿ ಸೊಸೈಟಿಯ ನಿವಾಸಿ 11 ವರ್ಷದ ಬಾಲಕಿಯ ಹೊರ ಹೋಗುತ್ತಿದ್ದಾಗ ನಾಲ್ಕೈದು ನಾಯಿಗಳು ಬೆನ್ನಟ್ಟಿ ಬಂದಿವೆ. ಇದರಿಂದ ಭಯಭೀತಗೊಂಡ ಬಾಲಕಿ ಸೊಸೈಟಿಯ ಗೇಟ್​ ಮೂಲಕ ಓಡಿ ಬಂದಿದ್ದಾಳೆ. ಆದರೂ, ನಾಯಿಗಳು ಒಳಗಡೆ ನುಗ್ಗಿವೆ ಬಂದಿವೆ.

11 ವರ್ಷದ ಬಾಲಕಿಯ ಬೆನ್ನಟ್ಟಿ ದಾಳಿ ಮಾಡಿದ ಬೀದಿ ನಾಯಿಗಳು.. ವಿಡಿಯೋ

ಈ ನಾಯಿಗಳು ಬಾಲಕಿಯನ್ನು ಬೆನ್ನಟ್ಟಿದಾಗ ಗೇಟ್​ ಬಳಿ ಭದ್ರತಾ ಸಿಬ್ಬಂದಿ ಕೂಡ ಇದ್ದರು. ಆದರೆ, ಏಕಾಏಕಿ ನುಗ್ಗಿ ಬಂದ ನಾಯಿಗಳನ್ನು ಭದ್ರತಾ ಸಿಬ್ಬಂದಿ ಕೂಡ ಆತಂಕಗೊಂಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ನಾಯಿಗಳ ದಾಳಿಯಲ್ಲಿ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಲಕಿ ಕಾಲಿಗೂ ನಾಯಿವೊಂದು ಕಚ್ಚಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:ನೌಕಾಪಡೆಯ ಮಾಜಿ ನೌಕರನ ಕೊಲೆ.. ಶವ 6 ತುಂಡುಗಳಾಗಿ ಕತ್ತರಿಸಿ ಎಸೆದಿದ್ದ ಪತ್ನಿ ಮತ್ತು ಮಗ

ABOUT THE AUTHOR

...view details