ನವದೆಹಲಿ:ಇಂದು ರಾಷ್ಟ್ರೀಯ ಸೇನಾ ದಿನ. ದೇಶ ಸುರಕ್ಷಿತವಾಗಿದೆ ಮತ್ತು ನಾವು ಸುರಕ್ಷಿತವಾಗಿದ್ದೇವೆಂದರೆ ಅದಕ್ಕೆ ಸೇನೆಯೇ ಕಾರಣ. ಬಲಿಷ್ಠತೆಯ ವಿಚಾರದಲ್ಲಿ ಭಾರತೀಯ ಸೇನೆ ಪ್ರಪಂಚದ ಅಗ್ರಮಾನ್ಯ ಸೇನೆಗಳ ಸಾಲಿನಲ್ಲಿ ನಿಲ್ಲುತ್ತದೆ.
ಸದಾ ಶಾಂತಿಯನ್ನು ಬಯಸುವ ಭಾರತೀಯ ಸೇನೆ. ಹಲವಾರು ಯುದ್ಧಗಳಲ್ಲಿ ಭಾರತವನ್ನು ಕೆಣಕಿದರೆ ಉಳಿಗಾಲವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ನೆರೆಹೊರೆಯ ರಾಷ್ಟ್ರಗಳು ಹಗೆ ಸಾಧಿಸುತ್ತಿರುವ ಪ್ರಸ್ತುತ ಸಮಯದಲ್ಲಿ ಯಾರಿಗೂ ಕಡಿಮೆಯಿಲ್ಲವೆಂಬಂತೆ ನಮ್ಮ ಸೇನೆ ದೇಶವನ್ನು ತಲೆ ಎತ್ತಿ ಮುನ್ನುಗ್ಗುವಂತೆ ಮಾಡುತ್ತಿದೆ.