ಭೋಪಾಲ್ (ಮಧ್ಯಪ್ರದೇಶ): ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಪರಿಪರಿಯಾಗಿ ಆಚರಿಸುತ್ತಿದ್ದಾರೆ.
71 ಅಡಿ ಉದ್ದದ 'ವ್ಯಾಕ್ಸಿನ್ ಕೇಕ್' ಕತ್ತರಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಇತ್ತ ಮಧ್ಯಪ್ರದೇಶದ ಭೋಪಾಲ್ನ ಲಾಲ್ಘಾಟಿ ಚೌರಾಹಾ ಎಂಬ ಪ್ರದೇಶದಲ್ಲಿ ಕೋವಿಡ್ ಲಸಿಕೆ ಆಕಾರದಲ್ಲಿರುವ 71 ಅಡಿ ಉದ್ದದ ವ್ಯಾಕ್ಸಿನ್ ಕೇಕ್ ಅನ್ನು ಬಿಜೆಪಿ ಕಾರ್ಯಕರ್ತರು ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಕೇಕ್ ಮೇಲೆ 'ನಮೋ ಟೀಕಾ' ಎಂದು ಬರೆಯಲಾಗಿದೆ.
ಇದನ್ನೂ ಓದಿ:ನರೇಂದ್ರ ಮೋದಿ ಹುಟ್ಟುಹಬ್ಬ: ಬಿಜೆಪಿಯಿಂದ 20 ದಿನಗಳ ಬೃಹತ್ ಅಭಿಯಾನ, 14 ಕೋಟಿ ಪಡಿತರ ಚೀಲ ವಿತರಣೆ
ಇನ್ನು ತಮ್ಮ ನಾಯಕರ ಜನ್ಮದಿನದ ಹಿನ್ನೆಲೆ ಬಿಜೆಪಿ ಪಕ್ಷವು ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜನಸೇವೆಗೆ ಮುಂದಾಗಿದ್ದಾರೆ. ಅವುಗಳು ಹೀಗಿವೆ,
- 20 ದಿನಗಳ ಕಾಲ ಬೃಹತ್ ಅಭಿಯಾನದಡಿ 'ಧನ್ಯವಾದ ಮೋದೀಜಿ' ಎಂದು ಮುದ್ರಣವಾಗಿರುವ 14 ಕೋಟಿ ಪಡಿತರ ಚೀಲ ವಿತರಣೆ
- ಕಾಶಿಯ ಭಾರತ ಮಾತಾ ದೇವಸ್ಥಾನದಲ್ಲಿ 71 ಸಾವಿರ ಮಣ್ಣಿನ ದೀಪ ಬೆಳಗಿಸಲು ಕ್ರಮ
- ಮೋದಿ ಫೋಟೋ ಇರುವ 5 ಕೋಟಿ ಪೋಸ್ಟ್ ಕಾರ್ಡ್ ದೇಶಾದ್ಯಂತ ಅಂಚೆ ಕಚೇರಿಗಳಿಂದ ಮೇಲ್
- ರಕ್ತದಾನ ಶಿಬಿರ, ನದಿಗಳಲ್ಲಿ ಸ್ವಚ್ಛತಾ ಅಭಿಯಾನ
- ಪ್ರಧಾನಿಯಾಗಿ ನರೇಂದ್ರ ಮೋದಿ ಸ್ವೀಕಾರ ಮಾಡಿರುವ ವಿವಿಧ ಉಡುಗೊರೆಗಳ ಇ-ಹರಾಜು
- ಇಂದು ದಾಖಲೆ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಕೈಗೊಳ್ಳಲು ಕ್ರಮ