ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪಾರ್ಟಿ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರ್ಯನ್ ಸೇರಿದಂತೆ ಇನ್ನಿಬ್ಬರನ್ನು ಇಂದು ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ಮುಂಬೈನಲ್ಲಿ ಎನ್‌ಸಿಬಿ ತಂಡ ನಡೆಸಿದ ದಾಳಿಗಳಲ್ಲಿ ಆರೋಪಿಗಳಿಗೆ ಎನ್‌ಸಿಬಿ ಬಲೆ ಹಾಕಿದೆ.