ಚಂಬಾ(ಹಿಮಾಚಲಪ್ರದೇಶ) :ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ. ರಸ್ತೆಗಳು ಹಿಮದಿಂದ ಆವೃತ್ತವಾಗಿ ಸಂಚಾರಕ್ಕೆ ಪರದಾಡಬೇಕಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಮಧ್ಯೆಯೂ ವಿವಾಹವಾದ ಜೋಡಿಯೊಂದರ ಮೆರವಣಿಗೆ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.
ಹಿಮಾಚಲದ ಚಂಬಾ ಪಟ್ಟಣದಲ್ಲಿ ವಧು-ವರರನ್ನು ಪಲ್ಲಕ್ಕಿ ಮೇಲೆ ಕೂರಿಸಿ ಹೊತ್ತುಕೊಂಡು ಸಂಭ್ರಮದಿಂದ ಮೆರವಣಿಗೆ ಮಾಡಲಾಗಿದೆ. ತಲೆಯ ಮೇಲೆ ಹಿಮ ಬೀಳುತ್ತಿದ್ದರೂ ಕೊಡೆ ಹಿಡಿದುಕೊಂಡು ಡೊಳ್ಳು ಬಾರಿಸುತ್ತಾ, ಕೊಳಲು, ವಾದ್ಯಗಳನ್ನು ನುಡಿಸುತ್ತಾ ಜನರು ಸಂಭ್ರಮದಿಂದ ನವವಿವಾಹಿತರನ್ನು ಮೆರವಣಿಗೆಯಲ್ಲಿ ಕೊಂಡೊಯ್ದಿದ್ದಾರೆ.