ಕರ್ನಾಟಕ

karnataka

ETV Bharat / bharat

ಕೆಲಸ ಮುಗಿಸಿ ಮಧ್ಯರಾತ್ರಿ10 ಕಿ.ಮೀ ಓಡುತ್ತಲೇ ಮನೆ ಸೇರುವ ಯುವಕ: ಯಾಕೆ ಗೊತ್ತಾ?

ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿರುವ 19ರ ಯುವಕನೊಬ್ಬ ಓಡುತ್ತಲೇ ಮನೆ ಸೇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವಿಡಿಯೋ ಅಪ್ಲೋಡ್​ ಮಾಡಿದ ಕೇವಲ 4 ಗಂಟೆಯಲ್ಲಿ 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಪ್ರದೀಪ್ ಮೆಹ್ರಾ
ಪ್ರದೀಪ್ ಮೆಹ್ರಾ

By

Published : Mar 21, 2022, 7:10 AM IST

Updated : Mar 21, 2022, 1:03 PM IST

ನೋಯ್ಡಾ(ಉತ್ತರಪ್ರದೇಶ): ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಓಡುವ ವಿಡಿಯೋ ಭಾರಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಈ ಯುವಕ ದೇಶಕ್ಕೆ ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಹಾಗಾದರೆ ಈತ ಮಾಡಿದ ಕೆಲಸವಾದರೂ ಏನೂ ಅಂತಿರಾ?

ಮೂಲತಃ ಉತ್ತರಾಖಂಡದವನಾದ ಪ್ರದೀಪ್ ಮೆಹ್ರಾ (19) ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಬರೋಲಾದಲ್ಲಿರುವ ಮನೆ ಸೇರುತ್ತಾರೆ. ಇದಕ್ಕೆ ಕಾರಣ ಆತ ಭಾರತೀಯ ಸೇನೆ ಸೇರಿಕೊಂಡು ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದಾನಂತೆ.

ಮಧ್ಯರಾತ್ರಿ10 ಕಿ.ಮೀ ಓಡುತ್ತಿರುವ ಯುವಕ

ಹೌದು, ಭಾರತೀಯ ಸೇನೆ ಸೇರಲು ದೈಹಿಕವಾಗಿ ಸದೃಢವಾಗಿರಬೇಕು. ಬೆಳಗ್ಗೆ ವ್ಯಾಯಾಮ, ಜಾಗಿಂಗ್, ಜಿಮ್​ಗೆ ಹೋಗಲು ನನ್ನ ಬಳಿ ಸಮಯವಿಲ್ಲ. ಹಾಗಾಗಿ, ಮಧ್ಯರಾತ್ರಿ ವರೆಗೂ ಕೆಲಸ ಮಾಡುತ್ತೇನೆ. ನಂತರ ಮನೆಗೆ ಓಡುತ್ತಲೇ ಹಿಂತಿರುಗುತ್ತೇನೆ. ಸಿಗುವ ವೇತನದಲ್ಲೇ ತಾಯಿಯ ಆರೋಗ್ಯ ನೋಡಿಕೊಳ್ಳುಬೇಕು, ಮನೆ ಖರ್ಚು ನಿಭಾಯಿಸಬೇಕು. ಜೊತೆಗೆ ನನ್ನ ದೇಹವನ್ನು ಫಿಟ್​ ಆಗಿ ಇಟ್ಟುಕೊಳ್ಳಬೇಕೆಂದು ಪ್ರತಿ ರಾತ್ರಿ ನಗರದ ರಸ್ತಗಳಲ್ಲಿ 10 ಕಿ.ಮೀ ಓಡುವ ಮೂಲಕ ಆರ್ಮಿ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದೇನೆ ಅಂತಾರೆ ಈ ಯುವಕ.

ಇನ್ನು ಪ್ರದೀಪ್ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಕಾರಿನಲ್ಲಿದ್ದ ಚಲನಚಿತ್ರ ನಿರ್ಮಾಪಕ ಮತ್ತು ಲೇಖಕ ವಿನೋದ್ ಕಪ್ರಿ ಈ ಯುವಕನನ್ನು ಪ್ರಶ್ನಿಸಿದ್ದಾರೆ. ಈ ರೀತಿ ಓಡುತ್ತಿರುವುದು ಯಾಕೆ?, ಕಾರಿನಲ್ಲಿ ಮನೆಗೆ ಬಿಡುತ್ತೇನೆ ಎಂದು ವಿನಂತಿಸಿದ್ದಾರೆ. ಆದರೆ, ಇದು ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ಅಭ್ಯಾಸ. ನನ್ನ ಬಳಿ ಹೆಚ್ಚು ಸಮಯವಿಲ್ಲ ಎಂದು ಓಡುತ್ತಲೇ ಯುವಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರದೀಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಕೇವಲ 4 ಗಂಟೆಯಲ್ಲಿ 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ:ಮತ್ತೊಮ್ಮೆ ಮಣಿಪುರ ಸಿಎಂ ಆಗಿ ಬಿರೇನ್​ ಸಿಂಗ್ ಅವಿರೋಧ ಆಯ್ಕೆ

Last Updated : Mar 21, 2022, 1:03 PM IST

ABOUT THE AUTHOR

...view details