ಕರ್ನಾಟಕ

karnataka

ETV Bharat / bharat

ಹೊಸ ಕುರಾನ್ ಬಳಕೆಗೆ ಅನುಮತಿ ನೀಡಿ: ಪಿಎಂಗೆ ಪತ್ರ ಬರೆದ ರಿಜ್ವಿ..! - ವಾಸಿಮ್ ರಿಜ್ವಿ ಕುರಾನ್

ಈ ಕುರಿತು ಪ್ರಧಾನಿ ಅವರಿಗೆ ಪತ್ರ ಬರೆದಿದ್ದು, ದೇಶದ ಎಲ್ಲಾ ಮದರಸ ಮತ್ತು ಮುಸ್ಲಿಂ ಸಂಸ್ಥೆಗಳಲ್ಲಿ ತಮ್ಮ ಹೊಸ ಕುರಾನ್ ಬಳಕೆಗೆ ಅಧಿಕಾರ ನೀಡುವಂತೆ ಒತ್ತಾಯಿಸಿದ್ದಾರೆ.

ರಿಜ್ವಿ
ರಿಜ್ವಿ

By

Published : May 29, 2021, 7:55 PM IST

ಲಖನೌ: ಕಾನೂನನ್ನು ಉಲ್ಲಂಘಿಸಿ ಉಗ್ರವಾದವನ್ನು ಉತ್ತೇಜಿಸುವ 26 ಪದ್ಯಗಳನ್ನು ತೆಗೆದು ಹಾಕಿ ತಾನು ಹೊಸ ಕುರಾನ್ ರಚಿಸಿದ್ದೇನೆ ಎಂದು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಹೇಳಿದ್ದಾರೆ.

ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿದ್ದು, ದೇಶದ ಎಲ್ಲ ಮದರಸ ಮತ್ತು ಮುಸ್ಲಿಂ ಸಂಸ್ಥೆಗಳಲ್ಲಿ ತಮ್ಮ ಹೊಸ ಕುರಾನ್ ಬಳಕೆಗೆ ಅಧಿಕಾರ ನೀಡುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಈ ಟಿವಿ ಭಾರತದೊಂದಿಗೆ ಮಾತನಾಡಿರುವ ರಿಜ್ವಿ, ತಾವು ರಚಿಸಿರುವ ಹೊಸ ಕುರಾನ್ ಸರಿಯಾಗಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇನೆ ಎಂದರು. ಉತ್ತರಪ್ರದೇಶದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ಸರ್ಕಾರಗಳಲ್ಲಿ ವಾಸಿಮ್ ಅವರು ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದರು.

ರಾಜ್ಯದಲ್ಲಿ ಯೋಗಿ ಸರ್ಕಾರ ರಚನೆಯಾದಾಗಿನಿಂದ ರಿಜ್ವಿ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು, ಸಿಬಿಐ ತನಿಖೆಯನ್ನೂ ಎದುರಿಸುತ್ತಿದ್ದಾರೆ.

ABOUT THE AUTHOR

...view details