ಚೆನ್ನೈ:ಸೀಟು ಹಂಚಿಕೆಗಾಗಿ ಕಠಿಣ ಪರಿಶ್ರಮ ಪಟ್ಟ ಬಳಿಕ ಕಾಂಗ್ರೆಸ್ಗೆ 25 ಸ್ಥಾನಗಳನ್ನು ಡಿಎಂಕೆ ನೀಡಿದೆ. 2016ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ 41 ಸೀಟುಗಳನ್ನು ನೀಡಿತ್ತು. ಆದರೆ, ಈ ಬಾರಿ ಕೇವಲ 25 ಸೀಟುಗಳು ಲಭ್ಯವಾಗಿದೆ.
ತಮಿಳುನಾಡು ಚುನಾವಣೆ: ಕಾಂಗ್ರೆಸ್ಗೆ 25 ಸೀಟು ನೀಡಿದ ಡಿಎಂಕೆ - Tamilnadu Congress Seat
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ 25 ಸೀಟುಗಳನ್ನು ಡಿಎಂಕೆ ನೀಡಿದೆ.

ತಮಿಳುನಾಡು ಚುನಾವಣೆ:
ಪಕ್ಷದ ಪದಾಧಿಕಾರಿಗಳ ಪ್ರಕಾರ ಡಿಎಂಕೆ ಮುಖ್ಯಸ್ಥ, ಎಂ.ಕೆ. ಸ್ಟಾಲಿನ್ ಅವರು ಕಾಂಗ್ರೆಸ್ ಪಕ್ಷಕ್ಕೆ 18 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಲು ಹಿಂಜರಿಯುತ್ತಿದ್ದರು. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಬ್ಬರ ಹಸ್ತಕ್ಷೇಪದ ನಂತರ ಅಂತಿಮವಾಗಿ 25 ಕ್ಷೇತ್ರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಪಕ್ಷದ ಮುಖಂಡರೊಬ್ಬರು ಈ ಬಗ್ಗೆ ಹೇಳಿಕೆ ನೀಡಿದ್ದು, ಕಾಂಗ್ರೆಸ್ಗೆ ನೀಡಿದ ಹೆಚ್ಚಿನ ಸ್ಥಾನವು ಉತ್ತಮ ಅಡಿಪಾಯವನ್ನು ಹೊಂದಿಲ್ಲ. ಡಿಎಂಕೆಯು ಸದ್ಯ 25 ಸ್ಥಾನಗಳನ್ನು ನೀಡಿದೆ" ಎಂದರು.