ಕರ್ನಾಟಕ

karnataka

ETV Bharat / bharat

ವುಡ್ಸ್​ ಕಾರು ಅಪಘಾತ: ಬ್ಲ್ಯಾಕ್​ ಬಾಕ್ಸ್​ ಡೇಟಾಕ್ಕಾಗಿ ವಾರಂಟ್​ ಜಾರಿ! - ವುಡ್ಸ್​ ಕಾರು ಅಪಘಾತ

ಕಾರು ಅಪಘಾತಕ್ಕೆ ಸಂಬಂಧಪಟ್ಟಂತೆ ಗಾಲ್ಫ್​ ತಾರೆ ಟೈಗರ್​ ವುಡ್ಸ್​ ಅತ್ಯಾಧುನಿಕ ಕಾರಿನೊಳಗೆ ಅಳವಡಿಸಿರುವ ಬ್ಲ್ಯಾಕ್​ ಬಾಕ್ಸ್​ ಡೇಟಾಕ್ಕಾಗಿ ವಾರಂಟ್​ ಜಾರಿಗೊಳಿಸಲಾಗಿದೆ.

Warrant executed for black box data in Woods' car crash  Tiger woods car crash  tiger woods  ಬ್ಲ್ಯಾಕ್​ ಬಾಕ್ಸ್​ ಡಾಟಾಗಾಗಿ ವಾರೆಂಟ್​ ಜಾರಿ  ಕಾರಿನ ಬ್ಲ್ಯಾಕ್​ ಬಾಕ್ಸ್​ ಡಾಟಾಗಾಗಿ ವಾರೆಂಟ್​ ಜಾರಿ!  ವುಡ್ಸ್​ ಕಾರು ಅಪಘಾತ  ವುಡ್ಸ್​ ಕಾರು ಅಪಘಾತ ಸುದ್ದಿ
ವುಡ್ಸ್​ ಕಾರು ಅಪಘಾತ

By

Published : Mar 4, 2021, 1:27 PM IST

ಲಾಸ್ ಏಂಜಲೀಸ್:ಕಳೆದ ವಾರ ದಕ್ಷಿಣ ಕ್ಯಾಲಿಫೋರ್ನಿಯಾ ರೋಲ್‌ಓವರ್ ಅಪಘಾತದಲ್ಲಿ ಗಾಲ್ಫ್ ತಾರೆ ಗಂಭೀರವಾಗಿ ಗಾಯಗೊಂಡಿರುವ ಘಟನೆಯ ಸ್ಪಷ್ಟತೆ ತಿಳಿಯಲು ಟೈಗರ್ ವುಡ್ಸ್ ಎಸ್‌ಯುವಿಯ ಕಪ್ಪು ಪೆಟ್ಟಿಗೆಯಿಂದ ದತ್ತಾಂಶ ಸಂಗ್ರಹಿಸಲು ಪತ್ತೆದಾರರು ಇಚ್ಛಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವುಡ್ಸ್ ಚಾಲನೆ ಮಾಡುತ್ತಿದ್ದ ಜೆನೆಸಿಸ್ ಎಸ್​ಯುವಿಯಿಂದ ಡೇಟಾವನ್ನು ಸಂಗ್ರಹಿಸಲು ಟ್ರಾಫಿಕ್ ತನಿಖಾಧಿಕಾರಿಗಳು ಸೋಮವಾರ ಸರ್ಚ್ ವಾರಂಟ್ ಅನ್ನು ಜಾರಿಗೊಳಿಸಿದ್ದಾರೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆ ತಿಳಿಸಿದೆ.

ಹೊಸದಾಗಿ ತಯಾರಿಸಿರುವ ಹ್ಯುಂಡೈ ಐಷಾರಾಮಿ ಬ್ರಾಂಡ್ 2021 ಜಿವಿ 80 ಕಾರಿನಲ್ಲಿ ಕಪ್ಪು ಪೆಟ್ಟಿಗೆ ಅಳವಡಿಸಲಾಗಿದೆ. ಈ ವ್ಯವಸ್ಥೆ ವಿಮಾನಗಳಲ್ಲಿ ಮಾತ್ರ ನಾವು ಕಾಣುತ್ತೇವೆ. ಆದ್ರೆ ಅತ್ಯಾಧುನಿಕ ಕಾರಿನಲ್ಲಿ ರೆಕಾರ್ಡರ್ ಅಂದ್ರೆ ಕಪ್ಪು ಪೆಟ್ಟಿಗೆ ಜೋಡಣೆ ಮಾಡಲಾಗಿದೆ. ಪ್ರಕರಣದ ತನಿಖೆಗಾಗಿ ಕಾರಿನ ಕಪ್ಪು ಪೆಟ್ಟಿಗೆಯಲ್ಲಿ ದತ್ತಾಂಶ ಸಂಗ್ರಹಿಸುವುದು ಅವಶ್ಯಕತೆಯಿಂದ ಸರ್ಚ್​ ವಾರಂಟ್​ ಜಾರಿಗೊಳಿಸಲಾಗಿದ್ದು, ಅಧಿಕಾರಿಗಳು ಕಪ್ಪು ಪೆಟ್ಟಿಗೆಯಿಂದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

ರೋಲ್​ಓವರ್​ ವಾಹನ ಅಪಘಾತದಲ್ಲಿ ಗಾಯಗೊಂಡಿರುವ ಗಾಲ್ಫ್ ತಾರೆ ಟೈಗರ್ ವುಡ್ಸ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ABOUT THE AUTHOR

...view details