ಕರ್ನಾಟಕ

karnataka

ETV Bharat / bharat

ಕುಸಿದು ಬಿದ್ದ ಗೋಡೌನ್​: 8 ರಿಂದ 10 ಕಾರ್ಮಿಕರು ಸಿಲುಕಿರುವ ಶಂಕೆ - Warehouse building collapses

ಮಹಾರಾಷ್ಟ್ರದ ಭಿವಾಂಡಿಯಲ್ಲಿ ಗೋದಾಮಿನ ಕಟ್ಟಡ ಕುಸಿದಿದೆ. ಪರಿಣಾಮ ಕಟ್ಟಡದ ಅಡಿಯಲ್ಲಿ ಎಂಟರಿಂದ ಹತ್ತು ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾಗ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Warehouse building collapses
ಕುಸಿದು ಬಿದ್ದ ಗೋಡೌನ್

By

Published : Feb 1, 2021, 4:25 PM IST

ಥಾಣೆ:ಒಂದು ಅಂತಸ್ತಿನ ಗೋದಾಮಿನ ಕಟ್ಟಡ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ತಾಲೂಕಿನ ಮಂಕೋಲಿ ಪ್ರದೇಶದಲ್ಲಿ ಕುಸಿದು ಬಿದ್ದಿದ್ದು, ಪರಿಣಾಮ ಏಂಟರಿಂದ ಹತ್ತು ಕಾರ್ಮಿಕರು ಕಟ್ಟಡದ ಕೆಳಗೆ ಸಿಲುಕಿದ್ದಾರೆ ಎನ್ನಲಾಗ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕುಸಿದು ಬಿದ್ದ ಗೋಡೌನ್

ರಕ್ಷಣಾ ಕಾರ್ಯಚರಣೆಗಾಗಿ ಎನ್‌ಡಿಆರ್‌ಎಫ್ ತಂಡಕ್ಕೂ ಸಹಾಯ ಮಾಡಲು ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಒಂದು ಅಂತಸ್ತಿನ ಗೋದಾಮು ಬೆಳಗ್ಗೆ 10.30ರ ವೇಳೆಗೆ ಕುಸಿದು ಬಿದ್ದಿದೆ. ಗೋಡೌನ್‌ನಲ್ಲಿ ಕೆಲಸ ಮಾಡುವ ಕನಿಷ್ಠ ಏಳು ರಿಂದ ಎಂಟು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಿವಾಂಜಿ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್ ಕದಮ್ ಹೇಳಿದ್ದಾರೆ.

ಓದಿ: ಟ್ರಕ್​ ಹರಿಸಿ ಸಬ್​ ಇನ್ಸ್​ಪೆಕ್ಟರ್​ ಹತ್ಯೆ

ಇದು ಕೊರಿಯರ್ ಕಂಪನಿಯ ಗೋದಾಮು ಎಂಬ ಮಾಹಿತಿ ಇದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಿವಾಂಡಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಹತ್ತು ಜನರು ಪ್ರಾಣ ಕಳೆದುಕೊಂಡಿದ್ದರು.

ABOUT THE AUTHOR

...view details