ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿದ ಡಿಕೆ ಸುರೇಶ್.. ನನ್ನ ಸಹೋದರನಿಗೆ ಸಿಎಂ ಪಟ್ಟ ನೀಡುವಂತೆ ಬೇಡಿಕೆ! - ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ನನ್ನ ಸಹೋದರನೇ ಸಿಎಂ ಆಗಬೇಕು ಎಂದು ಡಿ ಕೆ ಸುರೇಶ್​ ಪ್ರತಿಪಾದಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಕೆಶಿ ದೆಹಲಿ ಪ್ರವಾಸ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಡಿಕೆ ಸುರೇಶ್​ ದೆಹಲಿಗೆ ಭೇಟಿ ನೀಡಿದ್ದು, ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿದ ಡಿಕೆ ಸುರೇಶ್.. ನನ್ನ ಸಹೋದರನಿಗೆ ಸಿಎಂ ಪಟ್ಟ ನೀಡುವಂತೆ ಬೇಡಿಕೆ!
ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿದ ಡಿಕೆ ಸುರೇಶ್.. ನನ್ನ ಸಹೋದರನಿಗೆ ಸಿಎಂ ಪಟ್ಟ ನೀಡುವಂತೆ ಬೇಡಿಕೆ!

By

Published : May 16, 2023, 7:25 AM IST

Updated : May 16, 2023, 11:21 AM IST

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ. ಅವರ ಬದಲಿಗೆ ಅವರ ಸಹೋದರ ಸುರೇಶ್​ ಅವರು ದೆಹಲಿ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ಬಳಿಕ ಮಾತನಾಡಿದ ಡಿ ಕೆ ಸುರೇಶ್​, ನನ್ನ ಸಹೋದರನೇ ಮುಖ್ಯಮಂತ್ರಿಯಾಗಬೇಕೆಂದು ಬಯಸುವುದಾಗಿ ಹೇಳಿದರು.

ಡಿಕೆಶಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸುರೇಶ್​ ತಡವಾಗಿ ದೆಹಲಿ ತಲುಪಿದರು. ದೆಹಲಿಗೆ ಬಂದ ಅವರು ಸೀದಾ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತಮ್ಮ ಸಹೋದರ ಉನ್ನತ ಹುದ್ದೆ ಅಲಂಕರಿಸಬೇಕೇ ಎಂಬ ಪ್ರಶ್ನೆಗಳಿಗೆ ನನ್ನ ಅಣ್ಣ ಮುಖ್ಯಮಂತ್ರಿಯಾಗಬೇಕು ಎಂದು ನಾನು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ:ಕಾಂಗ್ರೆಸ್​ ಬಲ ಹೆಚ್ಚಿಸಿದ ಭಾರತ್​ ಜೋಡೋ.. ರಾಜ್ಯದಲ್ಲಿ ರಾಹುಲ್​ ಗಾಂಧಿ ಹೆಜ್ಜೆ ಇಟ್ಟಲ್ಲೆಲ್ಲಾ ಕೈ ಕಿಲ ಕಿಲ

ಕಾಂಗ್ರೆಸ್ ಮಾಡಿದ ಪ್ರತಿಜ್ಞೆ ಈಡೇರಿಸುತ್ತದೆ:ಇನ್ನು ಖರ್ಗೆ ಜತೆಗಿನ ಸಭೆ ಬಳಿಕ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, 6.5 ಕೋಟಿ ಕನ್ನಡಿಗರಿಗೆ ಮಾಡಿದ ಪ್ರತಿಜ್ಞೆ ಪರ ಕಾಂಗ್ರೆಸ್ ನಿಲ್ಲುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಕಾಂಗ್ರೆಸ್ ಕೇಂದ್ರ ವೀಕ್ಷಕರು ತಮ್ಮ ಲಿಖಿತ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದು, ಅವರು ವರದಿಯನ್ನು ಪರಿಶೀಲಿಸುತ್ತಾರೆ. ರಾಜ್ಯ ನಾಯಕರು ಮತ್ತು ಇತರ ಕೇಂದ್ರ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕರೆ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್‌ನ ಮೂವರು ಕೇಂದ್ರ ವೀಕ್ಷಕರು ಸೋಮವಾರ ಸಂಜೆಯೇ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕರ್ನಾಟಕದಲ್ಲಿ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಿದರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್ ಮತ್ತು ಪಕ್ಷದ ನಾಯಕ ದೀಪಕ್ ಬಬಾರಿಯಾ ಅವರು ಖರ್ಗೆ ಅವರ ನಿವಾಸದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಇದ್ದರು.

ಕಾಂಗ್ರೆಸ್ ಹಿರಿಯ ನಾಯಕರಾದ ಶಿಂಧೆ, ಸಿಂಗ್ ಮತ್ತು ಬವಾರಿಯಾ ಅವರನ್ನು ಕಾಂಗ್ರೆಸ್​ ಶಾಸಕಾಂಗ ಪಕ್ಷದ ವೀಕ್ಷಕರಾಗಿ ಖರ್ಗೆ ಅವರು ನಿಯೋಜಿಸಿದ್ದರು. ಭಾನುವಾರ ಸಂಜೆ ರಾಜ್ಯದ ಪಕ್ಷದ ಶಾಸಕರ ಜತೆ ಚರ್ಚೆ ನಡೆಸಿದ ವೀಕ್ಷಕರು ಸೋಮವಾರ ಮಧ್ಯಾಹ್ನ ಬೆಂಗಳೂರಿನಿಂದ ದೆಹಲಿಗೆ ವಾಪಸಾಗಿದ್ದರು. ಕೇಂದ್ರದಿಂದ ಬಂದ ವೀಕ್ಷಕರು ಭಾನುವಾರ ತಡರಾತ್ರಿ ಬೆಂಗಳೂರಿನಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಒಬ್ಬೊರನ್ನೇ ಕರೆದು ಮಾತನಾಡಿಸಿ ಪರಸ್ಪರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದ

ಇದನ್ನು ಓದಿ:ಕಾದು ನೋಡಿ, ಹೈಕಮಾಂಡ್​ ಸೂಚನೆ ಮೇರೆಗೆ ದೆಹಲಿಗೆ ಬಂದಿದ್ದೇನೆ: ಸಿದ್ದರಾಮಯ್ಯ

Last Updated : May 16, 2023, 11:21 AM IST

ABOUT THE AUTHOR

...view details