ಪಿಂಪ್ರಿ - ಚಿಂಚ್ವಾಡ್( ಮಹಾರಾಷ್ಟ್ರ): ಆರ್ಡರ್ ಮಾಡಿದ ಮಟನ್ ಸೂಪ್‌ನಲ್ಲಿ ಅನ್ನವನ್ನು ಕಂಡ ಇಬ್ಬರು ಯುವಕರು ವೇಟರ್ನನ್ನು ಹತ್ಯೆ ಮಾಡಿರುವ ಘಟನೆ ಪಿಂಪಲ್ ಸೌದಾಗರ್‌ನ ಸಾಸರವಾಡಿ ಮಟನ್ ಖಾನವಾಲ್‌ನಲ್ಲಿ ನಡೆದಿದೆ.
ಮಟನ್ ಸೂಪ್‌ನಲ್ಲಿ ಅನ್ನ ಇದ್ದಿದ್ದನ್ನು ಕಂಡು ರೊಚ್ಚಿಗೆದ್ದ ಗ್ರಾಹಕನಿಂದ ವೇಟರ್ ಹತ್ಯೆ ಮೃತರನ್ನು ಮಂಗೇಶ್ ಸಂಜಯ್ ಪೋಸ್ತೆ(19) ಎಂದು ಗುರುತಿಸಲಾಗಿದೆ. ಆರೋಪಿಗಳಾದ ವಿಜಯರಾಜ್ ವಾಘಿರೆ ಮತ್ತು ಆತನ ಸಹಚರ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಬಗ್ಗೆ ಅಜಿತ್ ಅಮುತ್ ಮುತ್ಕಳೆ ಎಂಬವರು ಸಾಂಗ್ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳಿಬ್ಬರು ಹೋಟೆಲ್ಗೆ ತಿನ್ನಲು ಬಂದಿದ್ದರು. ವಿಜಯರಾಜ್ ಆರ್ಡರ್ ಮಾಡಿದ ಮಟನ್ ಸೂಪ್‌ನಲ್ಲಿ ಅನ್ನದ ಕಣಗಳಿದ್ದವು. ಇದರಿಂದಾಗಿ ವೇಟರ್ ಮತ್ತು ವಿಜಯರಾಜ್ ನಡುವೆ ತೀವ್ರ ವಾಗ್ವಾದ ನಡೆದಿದೆ.
ಮಂಗೇಶ್ ಜೊತೆ ಉಪಾಹಾರ ಗೃಹದ ಉದ್ಯೋಗಿ ಅಜಿತ್ ಮತ್ತು ಸಚಿನ್ನ್ನು ಮರದ ಕೋಲಿನಿಂದ ಹೊಡೆದಿದ್ದಾರೆ. ಇದರಲ್ಲಿ ಗಂಭೀರವಾಗಿ ಗಾಯಗೊಂಡ ಮಂಗೇಶ್ ಸಾವನ್ನಪ್ಪಿದ್ದಾರೆ. ಹತ್ಯೆಯ ರೋಚಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:2,000 ರೂಪಾಯಿ ಹಣಕ್ಕಾಗಿ ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ