ವಾರಾಣಸಿ(ಉತ್ತರ ಪ್ರದೇಶ):ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಕೇಸ್ ದಿನದಿಂದ ದಿನಕ್ಕೆ ಹೆಚ್ಚು ತೀವ್ರತೆ ಪಡೆದುಕೊಳ್ಳುತ್ತಿದ್ದು, ಈ ಪ್ರಕರಣ ಇಡೀ ವಿಶ್ವದ ಗಮನ ಸೆಳೆದಿದೆ. ಈಗಾಗಲೇ ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸದ್ಯ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇದರ ಬೆನ್ನಲ್ಲೇ ಮಧ್ಯ ಪ್ರವೇಶ ಮಾಡಿರುವ ವಿಶ್ವ ವೈದಿಕ್ ಸನಾತನ ಸಂಘ, ಜ್ಞಾನವಾಪಿಯಲ್ಲಿ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯ ವಿಡಿಯೋ ತುಣುಕು ಹಾಗೂ ಇತರ ಅಂಶ ಹಂಚಿಕೊಳ್ಳದಂತೆ ಒತ್ತಾಯಿಸಿದೆ. ಮಸೀದಿ ಆವರಣದ ಬಾವಿಯಲ್ಲಿ ಶಿವಲಿಂಗ ಇರುವುದು ವಿಡಿಯೋ ತುಣುಕಿನಿಂದ ತಿಳಿದು ಬಂದಿತ್ತು. ಇದೇ ವಿಷಯವಾಗಿ ಎಇವಿಎಸ್ಎಸ್ ಈ ಒತ್ತಾಯ ಮಾಡಿದೆ.
ಜ್ಞಾನವಾಪಿ ಸಮೀಕ್ಷೆ ವಿಡಿಯೋ ದೃಶ್ಯ ಹಂಚಿಕೊಳ್ಳದಂತೆ ವಿಶ್ವ ವೈದಿಕ್ ಸನಾತನ ಸಂಘ ಒತ್ತಾಯ ಇದನ್ನೂ ಓದಿ:ತಾಯಿ ಕಳೆದುಕೊಂಡು ಖಿನ್ನತೆಗೊಳಗಾದ.. ಬೇಸರದಿಂದ ನದಿಯಲ್ಲಿ ಬಿಎಂಡಬ್ಲ್ಯೂ ಮುಳುಗಿಸಿ ತೆರಳಿದ!
ಜ್ಞಾನವಾಪಿ ಸಂಕೀರ್ಣ ಪ್ರಕರಣದ ಅರ್ಜಿದಾರರಲ್ಲಿ ಪ್ರಮುಖವಾಗಿರುವ ವಿಶ್ವ ವೈದಿಕ್ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ವಿಶೆನ್, ವಾರಾಣಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದರ ಜೊತೆಗೆ ಪ್ರಚಾರ ಮಾಡುವುದನ್ನ ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯ ಮಾಡಿದೆ. ರಾಷ್ಟ್ರೀಯ ಭದ್ರತೆ ಮತ್ತು ದೇಶದ ಕೋಮು ಸಾಮರಸ್ಯದ ಹಿತಾಸಕ್ತಿಯಿಂದ ಈ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದೆ.
ಜ್ಞಾನವಾಪಿ ಮಸೀದಿಯಲ್ಲಿ ಮಾಡಿರುವ ವಿಡಿಯೋ ಹಾಗೂ ವಿಷಯ ಕೇವಲ ಕೋರ್ಟ್ ಕಲಾಪಕ್ಕೆ ಸೀಮಿತವಾಗಿರಬೇಕು. ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಪಡಿಸಬಾರದು. ಅಥವಾ ಪ್ರಚಾರ ಮಾಡಬಾರದು ಎಂದು ಅವರು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಸೀದಿ ಸಮಿತಿ ಗಂಭೀರ ಆರೋಪ ಮಾಡಿದ್ದು, ಜ್ಞಾನವಾಪಿ ಮಸೀದಿ ಚಿತ್ರೀಕರಣ ನಡೆಸಿರುವುದು 1991ರ ಆರಾಧನಾ ಸ್ಥಳಗಳ ಕಾಯ್ದೆ ಉಲ್ಲಂಘನೆ ಮಾಡಿದೆ ಎಂದಿದೆ.