ಕರ್ನಾಟಕ

karnataka

ಇಲ್ಲಿ ರಣಹದ್ದು ರೆಸ್ಟೋರೆಂಟ್​​ನದ್ದೇ ಹವಾ?; ಏನಿದು ವಲ್ಚರ್ಸ್ ರೆಸ್ಟೋರೆಂಟ್ ವಿಶೇಷತೆ?.. ಇರೋದಾದರೂ ಎಲ್ಲಿ?

By

Published : Sep 13, 2022, 7:50 PM IST

ರಣಹದ್ದುಗಳ ರಕ್ಷಣೆಗಾಗಿ ಹಿಮಾಚಲದ ಗಡಿಭಾಗದ ಚಂಡೋಲಾ ಪ್ರದೇಶದ ಚಕ್ಕಿ ನದಿಯ ದಡದಲ್ಲಿ ವನ್ಯಜೀವಿ ಇಲಾಖೆ ವತಿಯಿಂದ ರಣಹದ್ದುಗಳ ರೆಸ್ಟೋರೆಂಟ್ ಆರಂಭಿಸಲಾಗಿದೆ.

ರಣಹದ್ದುಗಳ ರೆಸ್ಟೋರೆಂಟ್
ರಣಹದ್ದುಗಳ ರೆಸ್ಟೋರೆಂಟ್

ಪಠಾಣ್‌ಕೋಟ್‌(ಪಂಜಾಬ್​) : ಅಳಿವಿನಂಚಿನಲ್ಲಿರುವ ರಣಹದ್ದುಗಳನ್ನು ಉಳಿಸಲು ಪಠಾಣ್‌ಕೋಟ್‌ನ ವನ್ಯಜೀವಿ ವಿಭಾಗವು ಮಹತ್ವದ ಪ್ರಯತ್ನ ಮಾಡಿದ್ದು, ಪಠಾಣ್‌ಕೋಟ್‌ನ ಧಾರ್ ಬ್ಲಾಕ್‌ನ ಚಂದೋಲಾದಲ್ಲಿ 2012 ರಲ್ಲಿ ಮುಚ್ಚಲ್ಪಟ್ಟಿದ್ದ "ವಲ್ಚರ್ಸ್ ರೆಸ್ಟೋರೆಂಟ್" ಅನ್ನು ವನ್ಯಜೀವಿ ಇಲಾಖೆಯು ಒಂದು ವರ್ಷದ ಹಿಂದೆ ಪುನಃ ತೆರೆದಿದೆ. ಅಲ್ಲಿ ರಣಹದ್ದುಗಳಿಗೆ ತಿನ್ನಲು ಪ್ರಾಣಿಗಳ ಮಾಂಸವನ್ನು ನೀಡಲಾಗುತ್ತದೆ. ಹಿಮಾಚಲದಿಂದ ಹೆಚ್ಚಿನ ಸಂಖ್ಯೆಯ ರಣಹದ್ದುಗಳು ಚಂದೋಲಾ ಪ್ರದೇಶಕ್ಕೆ ಬರುತ್ತವೆ ಎಂಬುದು ತಿಳಿದುಬಂದಿದೆ.

ಪಠಾಣ್‌ಕೋಟ್‌ನ ಚಂದೋಲಾದಲ್ಲಿ ವಲ್ಚರ್ಸ್ ರೆಸ್ಟೋರೆಂಟ್ ತೆರೆದಿರುವ ಬಗ್ಗೆ ಮಾತನಾಡಿರುವುದು

ಮಡ್ಡೆಂಜಾರ್ ವನ್ಯಜೀವಿ ಇಲಾಖೆಗೂ ರಣಹದ್ದು ರೆಸ್ಟೋರೆಂಟ್ ಆರಂಭಿಸಲು ಜಿಲ್ಲಾಡಳಿತದಿಂದ 7 ಲಕ್ಷ 35 ಸಾವಿರ ಅನುದಾನ ಬಂದಿದೆ. ರಣಹದ್ದುಗಳ ರಕ್ಷಣೆಗಾಗಿ ಹಿಮಾಚಲದ ಗಡಿಭಾಗದ ಚಂಡೋಲಾ ಪ್ರದೇಶದ ಚಕ್ಕಿ ನದಿಯ ದಡದಲ್ಲಿ ವನ್ಯಜೀವಿ ಇಲಾಖೆ ವತಿಯಿಂದ ರಣಹದ್ದುಗಳ ರೆಸ್ಟೋರೆಂಟ್ ಆರಂಭಿಸಲಾಗಿದೆ.

ಅಲ್ಲಿ ರಣಹದ್ದುಗಳಿಗೆ ಮಾಂಸವನ್ನು ತಿನ್ನಲು ನೀಡಲಾಗುತ್ತದೆ. ರಣಹದ್ದುಗಳಿಗೆ ತಿನ್ನಿಸಿದ ಮಾಂಸವನ್ನು ಪರೀಕ್ಷಿಸಲು ಧಾರ್‌ನಲ್ಲಿ ಲ್ಯಾಬ್ ಅನ್ನು ಸಹ ಸ್ಥಾಪಿಸಲಾಗಿದೆ ಮತ್ತು ಪ್ರಯೋಗಾಲಯದಲ್ಲಿ ಮಾಂಸ ಪರೀಕ್ಷಿಸಿದ ನಂತರ ಅದನ್ನು ರಣಹದ್ದುಗಳಿಗೆ ನೀಡಲಾಗುತ್ತದೆ.

ಪಠಾಣ್‌ಕೋಟ್‌ನ ಹೊರತಾಗಿ ಹಿಮಾಚಲದ ದೂರದ ಪ್ರದೇಶಗಳಿಂದಲೂ ರಣಹದ್ದುಗಳು ಈ ರಣಹದ್ದು ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತವೆ ಮತ್ತು ಆಹಾರ ಸೇವಿಸಿದ ನಂತರ ತಮ್ಮ ದಾರಿಯಲ್ಲಿ ಹಿಂತಿರುಗುತ್ತವೆ. ಈ ಬಗ್ಗೆ ಮಾಹಿತಿ ನೀಡಿದ ವನ್ಯಜೀವಿ ಡಿಎಫ್‌ಒ ಪರಮ್‌ಜಿತ್ ಸಿಂಗ್, ಈಗ ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಮರಗಳನ್ನು ಕಡಿಯುವುದು ಮತ್ತು ಸರಿಯಾದ ಆಹಾರದ ಕೊರತೆಯಿಂದಾಗಿ ಅವುಗಳ ಜಾತಿಯು ತೀವ್ರವಾಗಿ ಕ್ಷೀಣಿಸಿದೆ. ನಮ್ಮ ಜೀವನದಲ್ಲಿ ರಣಹದ್ದುಗಳಿಗೆ ಬಹಳ ವಿಶೇಷವಾದ ಪ್ರಾಮುಖ್ಯತೆ ಇದೆ ಮತ್ತು ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಅವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ರಣಹದ್ದುಗಳನ್ನು ಉಳಿಸಲು ಇಲಾಖೆಯು ರಣಹದ್ದುಗಳ ಉಪಹಾರ ಮಂದಿರವನ್ನು ನಿರ್ಮಿಸಿದ್ದು, ಇದರಿಂದ ಈ ಪ್ರಭೇದ ಉಳಿಯುತ್ತದೆ. ಇಲ್ಲಿ ಮೊದಲು 30ರಿಂದ 40 ರಣಹದ್ದುಗಳು ಬರುತ್ತಿದ್ದವು. ಆದರೆ, ಈಗ ಅವುಗಳ ಸಂಖ್ಯೆ 350ರಿಂದ 400ಕ್ಕೆ ತಲುಪಿದೆ ಎಂದರು.

ಓದಿ:ಹೈಕೋರ್ಟ್​ ಅಂಗಳಕ್ಕೆ ಜ್ಞಾನವಾಪಿ ಕೇಸ್: ಹಿಂದೂ, ಮುಸ್ಲಿಂ ಪಕ್ಷಗಾರರಿಂದ ಅರ್ಜಿ ಸಲ್ಲಿಕೆ?

ABOUT THE AUTHOR

...view details