ಸಿರೋಹಿ (ರಾಜಸ್ಥಾನ):ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬ್ರಹ್ಮಕುಮಾರೀಸ್ನ ಮಾಜಿ ಮುಖ್ಯಸ್ಥರಾಗಿದ್ದ ರಾಜ್ಯಯೋಗಿನಿ ದಾದಿ ಜಾನಕಿ ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು. ಇನ್ನು ಸಚಿವ ರವಿಶಂಕರ್ ಪ್ರಸಾದ್ ಸಾಥ್ ನೀಡಿದರು.
"ನಾವು ಮಾನವೀಯತೆಯ ನಿಸ್ವಾರ್ಥ ಸೇವೆಗೆ ಮೀಸಲಾದ ದಾದಿಯ ಜೀವನದಿಂದ ಸ್ಫೂರ್ತಿ ಪಡೆಯಬೇಕು. ಜಗತ್ತಿಗೆ ದಾದಿ ಜಾನಕಿ ಜಿ ಅವರಂತಹ ಧ್ವನಿಗಳು ಬೇಕಾಗುತ್ತವೆ. ದಾದಿ ಜಾನಕಿ ತನ್ನ ಜೀವನ ಮಾನವೀಯತೆಗಾಗಿ ಅರ್ಪಿಸಿದ್ದಾರೆ. ಅವರು ತಮ್ಮ ಇಡೀ ಜೀವನ ಮಹಿಳಾ ಸಬಲೀಕರಣ, ಏಕತೆ, ಸಹೋದರತ್ವ ಮತ್ತು ಸಮಾಜದಲ್ಲಿ ಮಾನವೀಯ ಮೌಲ್ಯಗಳಿಗೆ ಮೀಸಲಿಟ್ಟರು" ಎಂದು ವೆಂಕಯ್ಯ ನಾಯ್ಡು ಹೇಳಿದರು.