ನವದೆಹಲಿ :ಹೆಚ್ಚುತ್ತಿರುವ ಕೋವಿಡ್ ಹಾಗೂ ಕೋವಿಡ್ ವ್ಯಾಕ್ಸಿನೇಷನ್ ಸಂಬಂಧ ಪಟ್ಟಂತೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ರಾಜ್ಯಪಾಲರು, ಡೆಪ್ಯೂಟಿ ಗವರ್ನರ್ಗಳನ್ನು ಉದ್ದೇಶಿಸಿ ವರ್ಚುಯಲ್ ಸಭೆ ನಡೆಸಲಿದ್ದಾರೆ.
ಎಲ್ಲಾ ರಾಜ್ಯಗಳ ಗವರ್ನರ್ಗಳನ್ನುದ್ದೇಶಿಸಿ ಮೋದಿ, ನಾಯ್ಡು ಭಾಷಣ - Covid19
ಈಗಾಗಲೇ ದೇಶದಲ್ಲಿ ಕೋವಿಡ್ 2ನೇ ಅಲೆ ಭಾರಿ ಪ್ರಮಾಣದಲ್ಲಿ ಹಬ್ಬುತ್ತಿದೆ. ಸೋಮವಾರ ಇದರ ಪ್ರಮಾಣ 1.60 ಲಕ್ಷ ಕೋವಿಡ್ ಪಾಸಿಟಿವ್ ಕೇಸ್ ದಾಖಲಾಗಿವೆ. ಇನ್ನು, ದೇಶಾದ್ಯಂತ ಲಸಿಕಾ ಉತ್ಸವ ಸಹ ನಡೆದಿದೆ..
ಟಿಕಾ(tika) ಉತ್ಸವದ ಬಗ್ಗೆ ವರ್ಚುಯಲ್ ಸಭೆ ವೇಳೆ, ಎಲ್ಲರೊಂದಿಗೆ ಉಪರಾಷ್ಟ್ರಪತಿ, ಪ್ರಧಾನಿ ಚರ್ಚಿಸಲಿದ್ದಾರೆ. ಇದೇ ವೇಳೆ, ಕೊರೊನಾ ಹರಡುವಿಕೆ ಮತ್ತು ಅದರ ನಿಯಂತ್ರಣ, ಆ ಬಗ್ಗೆ ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮ ಹಾಗೂ ವ್ಯಾಕ್ಸಿನೇಷನ್ ಕಾರ್ಯಾಚರಣೆ ಕುರಿತಂತೆ ಸಮಾಲೋಚಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಈಗಾಗಲೇ ದೇಶದಲ್ಲಿ ಕೋವಿಡ್ 2ನೇ ಅಲೆ ಭಾರಿ ಪ್ರಮಾಣದಲ್ಲಿ ಹಬ್ಬುತ್ತಿದೆ. ಸೋಮವಾರ ಇದರ ಪ್ರಮಾಣ 1.60 ಲಕ್ಷ ಕೋವಿಡ್ ಪಾಸಿಟಿವ್ ಕೇಸ್ ದಾಖಲಾಗಿವೆ. ಇನ್ನು, ದೇಶಾದ್ಯಂತ ಲಸಿಕಾ ಉತ್ಸವ ಸಹ ನಡೆದಿದೆ. ಈಗಾಗಲೇ ಟಿಕಾ ಉತ್ಸವದ ಅಂಗವಾಗಿ 30 ಲಕ್ಷ ವ್ಯಾಕ್ಸಿನೇಷನ್ ಹಾಕಿಸಲಾಗಿದೆ. ದಿನಕ್ಕೆ 40 ಲಕ್ಷ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.