ಗುವಾಹಟಿ/ಅಸ್ಸೋಂ: ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಭಾನುವಾರ ದೇಶದ ನದಿಗಳನ್ನು ಪುನಶ್ಚೇತನಗೊಳಿಸುವ ಅಗತ್ಯತೆಯ ಕುರಿತು ಪ್ರಬಲ ರಾಷ್ಟ್ರೀಯ ಅಭಿಯಾನಕ್ಕೆ ಕರೆ ನೀಡಿದರು. ಇದನ್ನು ತುರ್ತಾಗಿ ಮಾಡಬೇಕು ಎಂದು ಹೇಳಿದರು.
ಬೆಳೆಯುತ್ತಿರುವ ನಗರೀಕರಣ ಮತ್ತು ಕೈಗಾರಿಕೀಕರಣವು ದೇಶದ ವಿವಿಧ ಭಾಗಗಳಲ್ಲಿ ನದಿಗಳು ಮತ್ತು ಇತರ ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು. "ಹಿಂದೆ, ನಮ್ಮ ಹಳ್ಳಿಗಳು ಮತ್ತು ನಗರಗಳು ಹೆಚ್ಚು ಜಲಮೂಲಗಳಿಂದ ಕೂಡಿದ್ದವು.
ಆಧುನೀಕರಣದ ಹೆಸರಲ್ಲಿ ಮನುಷ್ಯನ ದುರಾಸೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸಿದನು ಮತ್ತು ಹಲವಾರು ಸ್ಥಳಗಳಲ್ಲಿ, ಜಲಮೂಲಗಳು ವಾಸ್ತವಿಕವಾಗಿ ಕಣ್ಮರೆಯಾಗಿವೆ ಅಥವಾ ಅತಿಕ್ರಮಣಗೊಂಡಿವೆ'' ಎಂದು ವೆಂಕಯ್ಯ ನಾಯ್ಡು ಬೇಸರ ವ್ಯಕ್ತಪಡಿಸಿದ್ರು.