ಲಖನೌ(ಉತ್ತರಪ್ರದೇಶ):ಇಡೀ ದೇಶದ ಗಮನ ಸೆಳೆದಿರುವ ಉತ್ತರಪ್ರದೇಶ ವಿಧಾನಸಭೆಗೆ 6ನೇ ಹಂತದ ಮತದಾನ ಶುರುವಾಗಿದೆ. ಹತ್ತು ಜಿಲ್ಲೆಗಳ 57 ಕ್ಷೇತ್ರಗಳಿಗೆ ಮತ ಚಲಾವಣೆಯಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ದಿಗ್ಗಜರು ಮತ್ತು ಕೋಟ್ಯಧಿಪತಿಗಳು ಅಖಾಡದಲ್ಲಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತ್ತೀಚೆಗಷ್ಟೇ ಬಿಜೆಪಿ ತೊರೆದು ಸಮಾಜವಾದಿ ಪಾರ್ಟಿ ಸೇರಿದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ ಹಲವಾರು 676 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.