ಮೀಜೊರಾಂ/ಛತ್ತೀಸ್‌ಗಢ:ಛತ್ತೀಸ್‌ಗಢ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಇಂದು ಮೊದಲ ಹಂತದಲ್ಲಿ 20 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. 223 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,304 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 40,78,681 ಮತದಾರರು ಮತದಾನ ಮಾಡುವರು. 19,93,937 ಪುರುಷ ಮತ್ತು 20,84,675 ಮಹಿಳಾ ಮತದಾರರಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ 69 ತೃತೀಯಲಿಂಗಿಗಳೂ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಈ ಪೈಕಿ 10 ಸ್ಥಾನಗಳು ನಕ್ಸಲ್‌ಪೀಡಿತ ಪ್ರದೇಶ ವ್ಯಾಪ್ತಿಯಲ್ಲಿವೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ವೋಟಿಂಗ್ ಮುಂದುವರಿಯುತ್ತದೆ. ಉಳಿದ 10 ಸ್ಥಾನಗಳಲ್ಲಿ ಬೆಳಿಗ್ಗೆ 8ರಿಂದ ಮತದಾನ ಆರಂಭವಾಗಿದ್ದು, ಸಂಜೆ 5ರವರೆಗೆ ನಡೆಯಲಿದೆ. 20 ಸ್ಥಾನಗಳಲ್ಲಿ 25,249 ಮತಗಟ್ಟೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಕ್ಮಾ, ಬಿಜಾಪುರ, ದಾಂತೇವಾಡ, ಕಂಕೇರ್ ಮತ್ತು ನಾರಾಯಣಪುರದ ದೂರದ ಪ್ರದೇಶಗಳಿಗೆ 156 ಮತಗಟ್ಟೆ ಸಿಬ್ಬಂದಿಯನ್ನು ಹೆಲಿಕಾಪ್ಟರ್‌ಗಳ ಮೂಲಕ ಕಳುಹಿಸಲಾಗಿದೆ. 2,431 ಬೂತ್‌ಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ.
ಅಭ್ಯರ್ಥಿಗಳೆಷ್ಟು?: ಅಂತಗಢ ವಿಧಾನಸಭಾ ಕ್ಷೇತ್ರದಲ್ಲಿ 13, ಭಾನುಪ್ರತಾಪುರದಲ್ಲಿ 14, ಕಂಕೇರ್‌ನಲ್ಲಿ 9, ಕೇಶ್ಕಲ್‌ನಲ್ಲಿ 10, ಕೊಂಡಗಾಂವ್‌ನಲ್ಲಿ 8, ನಾರಾಯಣಪುರದಲ್ಲಿ 9, ಬಸ್ತಾರ್‌ನಲ್ಲಿ 8, ಜಗದಲ್‌ಪುರದಲ್ಲಿ 11, ಚಿತ್ರಕೋಟೆಯಲ್ಲಿ 7, ದಂತೇವಾಡದಲ್ಲಿ 7, 8 ಅಭ್ಯರ್ಥಿಗಳು. ಬಿಜಾಪುರದಲ್ಲಿ 8, ಕೊಂಟಾದಲ್ಲಿ 8, ಖೈರಗಢದಲ್ಲಿ 11, ಡೊಂಗರಗಢದಲ್ಲಿ 10, ರಾಜನಂದಗಾಂವ್‌ನಲ್ಲಿ 29, ಡೊಂಗರಗಾಂವ್‌ನಲ್ಲಿ 12, ಖುಜ್ಜಿಯಲ್ಲಿ 10, ಮೊಹ್ಲಾ-ಮಾನ್‌ಪುರದಲ್ಲಿ 9, ಕವರ್ಧಾದಲ್ಲಿ 16 ಮತ್ತು ಪಂಡರಿಯಾದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತ ಬಹಿಷ್ಕಾರಕ್ಕೆ ಕರೆ:ಛತ್ತೀಸ್‌ಗಢದಲ್ಲಿ ರಾಯ್‌ಪುರದ ನಂತರ ಬಿಲಾಸ್‌ಪುರ್ ದೊಡ್ಡ ನಗರ. ನಗರದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿರುವ ಬೋದ್ರಿ ನಗರ ಪಂಚಾಯತ್‌ನ ಈ ವಾರ್ಡ್ ಹಳ್ಳಿಗಿಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಇಲ್ಲಿನ ಜನರಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಚರಂಡಿಗಳಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಯಲ್ಲೇ ಇವರ ಓಡಾಟ. ಈ ವಾರ್ಡಿನ ಜನತೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಾಗಿದೆ. ಆದರೆ ಎಲ್ಲರೂ ತಮ್ಮ ಮತ ಚಲಾಯಿಸುವಂತೆ ಈಟಿವಿ ಭಾರತ ತಂಡ ಮನವಿ ಮಾಡಿದೆ.