ನವದೆಹಲಿ:ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರವು 2024ರ ಮಾರ್ಚ್ 31 ರವರೆಗೆ ಗಡುವನ್ನು ವಿಸ್ತರಣೆ ಮಾಡಿದೆ. ಕಳೆದ ಜೂನ್‌ನಲ್ಲಿ ತನ್ನ ಅಧಿಸೂಚನೆಯಲ್ಲಿ, ಕೇಂದ್ರ ಸರ್ಕಾರವು 2023ರ ಏಪ್ರಿಲ್ 1ರಂದು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವೆಂದು ಸೂಚಿಸಿತ್ತು.
ಸಚಿವಾಲಯದ ಆದೇಶದಲ್ಲಿ ಏನಿದೆ?:ವೋಟರ್ ಐಡಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಕೇಂದ್ರವು 2024ರ ಮಾರ್ಚ್ 31ರವರೆಗೆ ಅವಧಿಯನ್ನು ವಿಸ್ತರಿಸಿದೆ. ಈ ಹಿಂದೆ, ಮತದಾರರ ಐಡಿಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು 2023ರ ಏಪ್ರಿಲ್ 1ರಂದು ಕೊನೆಯ ದಿನ ಆಗಿತ್ತು. ಸದ್ಯ ಈ ಗಡುವನ್ನು ವಿಸ್ತರಿಸಿ ಕಾನೂನೂ ಮತ್ತು ನ್ಯಾಯ ಸಚಿವಾಲಯವು ಆದೇಶ ಹೊರಡಿಸಿದೆ. ನೋಂದಾಯಿತ ಮತದಾರರು ತಮ್ಮ ವೋಟರ್ ಐಡಿಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಅಭಿಯಾನವನ್ನು ಆರಂಭಿಸಿದೆ.
ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್:ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರವು ವಿಸ್ತರಿಸಿದೆ. 2024ರ ಮಾ. 31ರ ಒಳಗೆ ಜೋಡಣೆ ಮಾಡಲು ಸೂಚಿಸಿದೆ. ಈ ಮೊದಲು 2023ರ ಮಾ.31ರ ಗಡುವು ನೀಡಲಾಗಿತ್ತು. ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಅಡಿಯಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.
1950ರ ಜನಪ್ರತಿನಿಧಿ ಕಾಯ್ದೆ:ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆಯು ಪ್ರಕಟಣೆ ಹೊರಡಿಸಿದೆ. 1950ರ ಜನಪ್ರತಿನಿಧಿ ಕಾಯ್ದೆಯ ಅನ್ವಯ 2022ರ ಜೂನ್ 17ರಂದು ಆದೇಶ ಹೊರಡಿಸಿದ್ದ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆಯ ಸೂಚನೆಯಲ್ಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಜೋಡಿಸಲು 2023ರ ಮಾ. 31ರಂದು ಕಡೆಯ ದಿನ ಎಂದು ತಿಳಿಸಲಾಗಿತ್ತು. ಪ್ರಸ್ತುತ ಈ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ಮತದಾರರು ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ನೊಂದಿಗೆ ಜೋಡಿಸಲು 2024ರ ಮಾ. 31ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.