ಕರ್ನಾಟಕ

karnataka

ETV Bharat / bharat

ವಿವಾಹಿತ ಮಹಿಳೆ ಮೇಲೆ ಹಲ್ಲೆ ಮಾಡಿ ಬಂಧನದಲ್ಲಿಟ್ಟ ಸ್ವಯಂಸೇವಕ: 20 ದಿನಗಳ ಕಾಲ ಅತ್ಯಾಚಾರ ನಡೆಸಿದ ಆರೋಪ

ಗ್ರಾಮದ ಸ್ವಯಂಸೇವಕನೊಬ್ಬ ವಿವಾಹಿತ ಮಹಿಳೆ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಬಂಧಿಯಾಗಿಟ್ಟು, 20 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

Volunteer assault on married woman in Anantapur  raped her for 20 days after locking her in a room  assault on married woman in Anantapur  ವಿವಾಹಿತ ಮಹಿಳೆ ಮೇಲೆ ಸ್ವಯಂಸೇವಕ ಹಲ್ಲೆ  20 ದಿನಗಳ ಕಾಲ ಅತ್ಯಾಚಾರ  ವಿವಾಹಿತ ಮಹಿಳೆ ಮೇಲೆ ಹಲ್ಲೆ  ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ  ಮಕ್ಕಳನ್ನು ಕೊಲ್ಲುವುದಾಗಿ ಸತೀಶ್​ ಬೆದರಿಕೆ
20 ದಿನಗಳ ಕಾಲ ಅತ್ಯಾಚಾರ

By ETV Bharat Karnataka Team

Published : Oct 28, 2023, 1:20 PM IST

ಅನಂತಪುರಂ, ಆಂಧ್ರಪ್ರದೇಶ:ಗ್ರಾಮದ ಸ್ವಯಂಸೇವಕನೊಬ್ಬ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ?: ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ನಾನು ಸುಖವಾಗಿ ಜೀವನ ನಡೆಸುತ್ತಿದ್ದೆ. ಇದೇ ತಾಲೂಕಿನ ಕೋನ ಉಪ್ಪಲಪಾಡು ಗ್ರಾಮದ ದಾಸರಿ ಸತೀಶ್ ಎಂಬುವರು ಗ್ರಾಮ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಮನೆಗೆ 3 ತಿಂಗಳಿಂದಲೂ ಭೇಟಿ ನೀಡುತ್ತಿದ್ದರು. ಈ ವೇಳೆ ಅವರ ಪರಿಚಯವಾಗಿತ್ತು. ಕೆಲಸದ ನಿಮಿತ್ತ ಇದೇ ತಿಂಗಳ 7ರಂದು ನನ್ನ ಆರು ವರ್ಷದ ಮಗಳೊಂದಿಗೆ ನಾನು ಸತೀಶ್ ಕಾರಿನಲ್ಲಿ ತೆರಳಿದ್ದೆವು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ ನಮ್ಮನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನನ್ನ ಆಸೆಯನ್ನು ಈಡೇರಿಸು, ಇಲ್ಲವಾದರೆ ಪತಿ ಹಾಗೂ ಮಕ್ಕಳನ್ನು ಕೊಲ್ಲುವುದಾಗಿ ಸತೀಶ್​ ಬೆದರಿಕೆ ಹಾಕಿದ್ದನು. ನನಗೆ ಏನು ಮಾಡ್ಬೇಕೆಂದು ತೋಚದ ಸ್ಥಿತಿ ಎದುರಾಯ್ತು. ಬಳಿಕ ಅವನ ಮಾತಿಗೆ ಒಪ್ಪಬೇಕಾದ ಸ್ಥಿತಿ ನಿರ್ಮಾಣವಾಯಿತು. ಮಗುವನ್ನು ಬಲವಂತವಾಗಿ ಕಾರಿನಲ್ಲಿ ಬಿಟ್ಟು ಸ್ಥಳೀಯ ಕೊಠಡಿಗೆ ಕರೆದೊಯ್ದು ಸತೀಶ್​ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆದ ಘಟನೆಯ ಬಗ್ಗೆ ಹೇಳಿದ್ದಾರೆ.

ಅಷ್ಟೇ ಅಲ್ಲ ಸತೀಶ್​ ಸತತ ಎರಡು ದಿನಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗುತ್ತಲೇ ಇದ್ದನು. ಬಳಿಕ ಕಾರನ್ನು ಬಾಡಿಗೆಗೆ ಪಡೆದು ಇದೇ ತಿಂಗಳ 9 ರಂದು ತಿರುಪತಿಗೆ ಕರೆದುಕೊಂಡು ಹೋಗಿದ್ದನು. ಸತೀಶ್​ ರೂಂ ಬಾಡಿಗೆ ಪಡೆದು ನನ್ನ ಮಗಳ ಮುಂದೆ ಹಲವು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ನಾನು ರೂಂನಿಂದ ಹೊರಬರಲು ಪ್ರಯತ್ನಿಸಿದರೂ ಸಹ ನನ್ನಿಂದ ಸಾಧ್ಯವಾಗಲಿಲ್ಲ. ಆ ರೂಂನೊಳಗೆ ನಮ್ಮಿಬ್ಬರನ್ನು ಕೂಡಿ ಹಾಕಿದ್ದನು ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ನಾಲ್ಕು ದಿನಗಳಿಂದಲೂ ತಾಯಿ ಮತ್ತು ಮಗಳು ನಾಪತ್ತೆಯಾದ ಹಿನ್ನೆಲೆ ಆಕೆಯ ಕುಟುಂಬಸ್ಥರು ಈ ತಿಂಗಳ 11 ರಂದು ಯಡಿಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸ್​ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಇದೇ ತಿಂಗಳ 25ರಂದು ತಿರುಪತಿ ಪೊಲೀಸರ ನೆರವಿನೊಂದಿಗೆ ಸಂತ್ರಸ್ತೆ ಇದ್ದ ರೂಂ ಅನ್ನು ಪತ್ತೆ ಹಚ್ಚಿದ್ದರು. ಬಳಿಕ ಪೊಲೀಸ್​ ಸಿಬ್ಬಂದಿಯೊಂದಿಗೆ ತೆರಳಿದ ಅಧಿಕಾರಿಗಳು ವಿವಾಹಿತ ಮಹಿಳೆಯನ್ನು ಬಂಧನದಿಂದ ಮುಕ್ತಗೊಳಿಸಿದರು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ:ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ: ನೆರೆಹೊರೆಯ ಯುವಕರಿಂದಲೇ ಕೃತ್ಯ!

ABOUT THE AUTHOR

...view details