ಹೈದರಾಬಾದ್: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2021ರಲ್ಲಿ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರಕಟಿಸಿದ್ದು, ಅಲ್ಲಿ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿವೆ. ಸ್ಕ್ರ್ಯಾಪೇಜ್ ನೀತಿಯು ಹಳೆಯ ವಾಹನಗಳನ್ನು ರಸ್ತೆಗಿಳಿಯದಂತೆ ತಡೆಯಬಹುದು. ಇದರಿಂದಾಗಿ ಕಡಿಮೆ ವಾಯು ಮಾಲಿನ್ಯ, ಉತ್ತಮ ಇಂಧನ ದಕ್ಷತೆ ಮತ್ತು ಬೇಡಿಕೆಯ ಹೆಚ್ಚಳದಿಂದಾಗಿ ವಾಹನ ಉತ್ಪಾದನಾ ವಲಯಕ್ಕೆ ಉತ್ತೇಜನ ಸಿಗಲಿದೆ.
"ಹಳೆಯ ಮತ್ತು ಅನರ್ಹ ವಾಹನಗಳನ್ನು ಹೊರಹಾಕಲು ನಾವು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇವೆ. ಇದು ಇಂಧನ ದಕ್ಷತೆ, ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ವಾಹನ ಮಾಲಿನ್ಯ ಮತ್ತು ತೈಲ ಆಮದು ಕಡಿಮೆಯಾಗುತ್ತದೆ. ವೈಯಕ್ತಿಕ ವಾಹನಗಳ ಸಂದರ್ಭದಲ್ಲಿ ವಾಹನಗಳು 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳ ಸಂದರ್ಭದಲ್ಲಿ 15 ವರ್ಷಗಳ ನಂತರ ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಗಳಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗುತ್ತವೆ. ಯೋಜನೆಯ ವಿವರಗಳನ್ನು ಸಚಿವಾಲಯ ಪ್ರತ್ಯೇಕವಾಗಿ ಹಂಚಿಕೊಳ್ಳಲಿದೆ" ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಗ್ಲೋಬಲ್ ಡಾಟಾ ಪ್ರಕಾರ, ಭಾರತದಲ್ಲಿ 2019ರಲ್ಲಿ ಸುಮಾರು 2.34 ಮಿಲಿಯನ್ ಪ್ರಯಾಣಿಕ ವಾಹನಗಳು 15 ವರ್ಷ ಮತ್ತು ಅದಕ್ಕಿಂತಲೂ ಹಳೆಯದಾಗಿದೆ.
ಭಾರತದಲ್ಲಿ ನೋಂದಾಯಿತ ವಾಹನಗಳ ಒಟ್ಟು ಸಂಖ್ಯೆ:
ವರ್ಷ | ಭಾರತದಲ್ಲಿ ನೋಂದಾಯಿತ ವಾಹನಗಳು |
2001 | 54991026 |
2010 | 127745972 |
2015 | 230030598 |
ಭಾರತದಲ್ಲಿ ಸರ್ಕಾರಿ ವಾಹನಗಳಿಗೆ ಅನುಮೋದಿತ ವಾಹನ ಸ್ಕ್ರ್ಯಾಪೇಜ್ ನೀತಿ:
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (ಮೊಆರ್‌ಟಿಎಚ್) 2021ರ ಜನವರಿ 25ರಂದು ಸರ್ಕಾರ ಮತ್ತು ಪಿಎಸ್‌ಯು ಒಡೆತನದ ವಾಹನಗಳಿಗೆ 15 ವರ್ಷಕ್ಕಿಂತ ಹಳೆಯದಾದ ವಾಹನಗಳ ಸ್ಕ್ರ್ಯಾಪೇಜ್ ನೀತಿಯನ್ನು ಅನುಮೋದಿಸಿತು.
ಈ ನೀತಿಯು 2022ರ ಏಪ್ರಿಲ್ 1ರಿಂದ ಜಾರಿಗೆ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ವಾಹನಗಳಿಗೆ ಅನ್ವಯಿಸುತ್ತದೆ. ಮಾಲಿನ್ಯವನ್ನು ತಡೆಗಟ್ಟುವುದು ಸರ್ಕಾರದ ಆದ್ಯತೆಯಾಗಿದ್ದು, ಹೀಗಾಗಿ ವಾಹನ ಸ್ಕ್ರ್ಯಾಪೇಜ್ ನೀತಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಕಳೆದ ವರ್ಷ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.
ಸಾಂಕ್ರಾಮಿಕ ರೋಗದಿಂದ ಹೆಚ್ಚಾಗಿ ಪರಿಣಾಮ ಬೀರುವ ವಾಹನ ಉದ್ಯಮದಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುವ ಉದ್ದೇಶವನ್ನು ಈ ನೀತಿಯು ಹೊಂದಿದೆ.
ವಿಶ್ವಾದ್ಯಂತ ಸ್ಕ್ರ್ಯಾಪೇಜ್ ನೀತಿಯ ಹೋಲಿಕೆ:
ದೇಶ | ಸಾರ್ವಜನಿಕರಿಗೆ ಪ್ರೋತ್ಸಾಹ | ಸರ್ಕಾರಕ್ಕೆ ವೆಚ್ಚ | ವಾಹನಗಳ ವಯಸ್ಸು | ಹೊಸ ಕಾರುಗಳಿಗೆ ಷರತ್ತುಗಳು | ನೋಂದಣಿಗಳಲ್ಲಿ ಬದಲಾವಣೆ |
ಯುಎಸ್ಎ | 4500 ಡಾಲರ್ಸ್ | 3 ಬಿಲಿಯನ್ ಡಾಲರ್ಸ್ | 8 ವರ್ಷಗಳಿಗಿಂತ ಹೆಚ್ಚು | ಇಂಧನ ದಕ್ಷತೆ ಗರಿಷ್ಠ 247 ಗ್ರಾಂ/ಕಿ.ಮೀ. CO2 ಎಮಿಶನ್ | - |
ಯುಕೆ | 2000 ಪೌಂಡ್ಸ್ | 500 ಮಿಲಿಯನ್ ಡಾಲರ್ಸ್ | 9 ವರ್ಷಗಳಿಗಿಂತ ಹೆಚ್ಚು | - | -15.50% |
ಜರ್ಮನಿ | 3552 ಡಾಲರ್ಸ್ | 7.1 ಬಿಲಿಯನ್ ಡಾಲರ್ಸ್ | 9 ವರ್ಷಗಳಿಗಿಂತ ಹೆಚ್ಚು | - | 26.10% |
ಫ್ರಾನ್ಸ್ | 1421 ಡಾಲರ್ಸ್ | 554 ಮಿಲಿಯನ್ | 10 ವರ್ಷಗಳಿಗಿಂತ ಹೆಚ್ಚು | ಇಂಧನ ದಕ್ಷತೆ ಗರಿಷ್ಠ 160 ಗ್ರಾಂ/ಕಿ.ಮೀ. | 2.40% |
ಸ್ಪೈನ್ | 2000 ಯುರೋಸ್ | 400 ಮಿಲಿಯನ್ ಯುರೋಸ್ | 10 ವರ್ಷಗಳಿಗಿಂತ ಹೆಚ್ಚು | ಇಂಧನ ದಕ್ಷತೆ ಗರಿಷ್ಠ 149 ಗ್ರಾಂ/ಕಿ.ಮೀ. CO2 ಎಮಿಶನ್ | -28.60% |