ಕರ್ನಾಟಕ

karnataka

ETV Bharat / bharat

ವಿವೇಕ ರೆಡ್ಡಿ ಹತ್ಯೆ ಪ್ರಕರಣ: ಸಂಸದ ಅವಿನಾಶ್‌ ರೆಡ್ಡಿ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್​ - ತೆಲಂಗಾಣ ಹೈಕೋರ್ಟ್

ಬಂಧನದ ವಿರುದ್ಧ ಸಂಸದ ವೈ.ಎಸ್‌. ಅವಿನಾಶ್‌ ರೆಡ್ಡಿ ಮನವಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದೆ. ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

YSRCP MP
ಸಂಸದ ಅವಿನಾಶ್‌ ರೆಡ್ಡಿ

By

Published : Apr 24, 2023, 7:44 PM IST

ನವದೆಹಲಿ:ವೈಎಸ್‌ಆರ್‌ಸಿಪಿ ಸಂಸದ ವೈ.ಎಸ್‌. ಅವಿನಾಶ್‌ ರೆಡ್ಡಿ ಅವರನ್ನು ಬಂಧಿಸದಂತೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ತಡೆಯೊಡ್ಡಿದ್ದ ತೆಲಂಗಾಣ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಜೊತೆಗೆ ಮುದ್ರಿತ ಪ್ರಶ್ನಾವಳಿಯನ್ನು ನೀಡುವ ಮೂಲಕ ಸಂಸದರನ್ನು ಕೇಂದ್ರೀಯ ಸಂಸ್ಥೆ ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿದೆ.

ಏನಿದು ಪ್ರಕರಣ?:2019ರ ಮಾರ್ಚ್ 15 ರಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಅವರ ಕಿರಿಯ ಸಹೋದರ ವಿವೇಕಾನಂದ ರೆಡ್ಡಿ ಅವರು ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಾವಿನ ಬಗ್ಗೆ ಆರಂಭದಲ್ಲಿ ರಾಜ್ಯ ಅಪರಾಧ ತನಿಖಾ ವಿಭಾಗದ (ಸಿಐಡಿ), ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿತ್ತು. ನಂತರ, ಜುಲೈ 2020ರಲ್ಲಿ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸಲಾಯಿತು. ಅಕ್ಟೋಬರ್ 26, 2021ರಂದು ಸಿಬಿಐ ಕೊಲೆ ಪ್ರಕರಣದ ಕುರಿತು ಚಾರ್ಜ್ ಶೀಟ್ ಸಲ್ಲಿಸಿತು. ಜನವರಿ 31, 2022ರಂದು ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಮೊದಲ ಪೀಠವು ಸಿಬಿಐನಿಂದ ಸಲ್ಲಿಕೆಯಾಗಿರುವ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿದೆ. ಜೂನ್ ಅಂತ್ಯದೊಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಮುಕ್ತಾಯಗೊಳಿಸಿದೆ. ಆದರೆ, ಹೈಕೋರ್ಟ್ ತಪ್ಪಾಗಿ ಅನ್ವಯಿಸಿ ಅಸಾಮಾನ್ಯ ಆದೇಶವನ್ನು ನೀಡಿದೆ ಎಂದು ನ್ಯಾಯ ಪೀಠ ಹೇಳಿದೆ.

ಜಾಮೀನು ಅರ್ಜಿ ಹಿಂಪಡೆಯಬೇಕು: 'ಎಲ್ಲ ವಾದಗಳನ್ನು ಆಲಿಸಿದ್ದೇವೆ... ಅಫಿಡವಿಟ್ ಮತ್ತು ರಿಮಾಂಡ್ ವರದಿಗಳನ್ನು ಪರಿಶೀಲಿಸಿದ್ದೇವೆ...' ತೆಲಂಗಾಣ ಹೈಕೋರ್ಟ್‌ನಲ್ಲಿ ಅಫಿಡವಿಟ್ ಹಿಂಪಡೆದು ನಿರೀಕ್ಷಣಾ ಜಾಮೀನು ಸಹ ಹಿಂಪಡೆಯುವಂತೆ ಸಿಜೆಐ ಚಂದ್ರಚೂಡ್ ಆದೇಶಿಸಿದರು. ಅವಿನಾಶ್ ರೆಡ್ಡಿ ಕೊಲೆ ಪ್ರಕರಣದ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ ಎಂದು ಸುನಿತಾ ಪರ ವಕೀಲರು ವಾದಿಸಿದರು. ಸಿಐ ಶಂಕರಯ್ಯ ಅವರು ತಮ್ಮ ಸಾಕ್ಷ್ಯದಲ್ಲಿ ಇದನ್ನೇ ಹೇಳಿದ್ದಾರೆ ಎಂದು ವಕೀಲ ಸಿದ್ಧಾರ್ಥ ಲೂತ್ರಾ ಹೇಳಿದರು. ವಾದ-ಪ್ರತಿವಾದಗಳ ನಂತರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶದ ಪ್ರತಿಯನ್ನು ಓದಿದರು. ಹತ್ಯೆ ಪ್ರಕರಣದಲ್ಲಿ ಅವಿನಾಶ್ ಪಾತ್ರವಿದೆ ಎಂದು ಸಿಬಿಐ ಸ್ಪಷ್ಟವಾಗಿ ಹೇಳಿದೆ ಎಂದ ಸಿಜೆಐ, ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಈ ಪ್ರಕರಣದಲ್ಲಿ ಹೈಕೋರ್ಟ್ ಹೇಗೆ ಹಸ್ತಕ್ಷೇಪ ಮಾಡುತ್ತದೆ ಎಂದು ಸಿಜೆಐ ಪ್ರಶ್ನಿಸಿದರು.

ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್ ಪ್ರಶ್ನೆ:ಸಿಬಿಐನ ಕೆಲಸವನ್ನು ತೆಲಂಗಾಣ ಹೈಕೋರ್ಟ್ ಹೇಗೆ ಮಾಡುತ್ತದೆ? ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು. ಆರೋಪಿಗಳಿಗೆ ಲಿಖಿತ ಪ್ರಶ್ನೆಗಳನ್ನು ನೀಡುವುದು ಸಮಂಜಸವಲ್ಲ ಎಂದರು. ಈ ಆದೇಶಗಳು ಸಿಬಿಐ ತನಿಖೆ ಮೇಲೆ ಪರಿಣಾಮ ಬೀರಲಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಅವಿನಾಶ್ ಪರ ವಕೀಲರು ನಾಳೆ ಹೈಕೋರ್ಟ್​ ನಲ್ಲಿ ಪ್ರಕರಣದ ವಿಚಾರಣೆ ನಡೆಸಲಿದ್ದು, ಅಲ್ಲಿಯವರೆಗೆ ಅವರನ್ನು ಬಂಧಿಸದಂತೆ ಕೋರಿದರು. ಆದರೆ, ಅಂತಹ ಆದೇಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನಿಮ್ಮ ಮೇಲ್ಮನವಿಯನ್ನು ಅನುಮತಿಸಿದರೆ ಆದೇಶಗಳು ವ್ಯತಿರಿಕ್ತವಾಗಿರುತ್ತವೆ ಎಂದು ತಿಳಿಸಿದೆ.

ವಿವೇಕಾನಂದ ರೆಡ್ಡಿ ಹತ್ಯೆಗೆ ಸಂಬಂಧಿಸಿದಂತೆ ಮಾರ್ಚ್ 16 ರಂದು ವೈಎಸ್ ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಬಂಧಿಸಿತ್ತು. ಅವರು ಕಡಪಾ ಸಂಸದ ಅವಿನಾಶ್ ರೆಡ್ಡಿ ಅವರ ತಂದೆ ಮತ್ತು ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪ.

ಇದನ್ನೂ ಓದಿ:TSPSC ಪೇಪರ್ ಸೋರಿಕೆ ಪ್ರಕರಣ; ಮಹಿಳಾ ಕಾನ್ಸ್​​ಟೇಬಲ್​ಗೆ ಕಪಾಳಮೋಕ್ಷ, ವೈಎಸ್ ಶರ್ಮಿಳಾ ವಶಕ್ಕೆ

ABOUT THE AUTHOR

...view details