ಕರ್ನಾಟಕ

karnataka

ETV Bharat / bharat

ಮಾಸ್ಕ್, ಹೆಲ್ಮೆಟ್​ ಧರಿಸದೇ ಬೈಕ್​ ರೈಡ್​: ಪೊಲೀಸರು ದಂಡ ಹಾಕಿದ್ದನ್ನು ಸ್ವಾಗತಿಸಿದ ವಿವೇಕ್​ ಒಬೆರಾಯ್ - ವಿವೇಕ್ ಒಬೆರಾಯ್

ಮಾಸ್ಕ್​ ಹಾಗೂ ಹೆಲ್ಮೆಟ್​ ಇಲ್ಲದೇ ಪ್ರಯಾಣ ಮಾಡುತ್ತಿದ್ದಾಗ ತಮಗೆ ದಂಡ ಹಾಕಿದ ಪೊಲೀಸರ ಕ್ರಮವನ್ನು ನಟ ವಿವೇಕ್​ ಒಬೆರಾಯ್ ಸ್ವಾಗತಿಸಿದ್ದಾರೆ.

Vivek Oberoi responds
ನಟ ವಿವೇಕ್​ ಒಬೆರಾಯ್

By

Published : Feb 20, 2021, 7:37 PM IST

ಮುಂಬೈ: ಮಾಸ್ಕ್​ ಧರಿಸದೇ ಬೈಕ್​ ರೈಡ್​ ಮಾಡಿದ್ದಕ್ಕೆ ಮುಂಬೈ ಪೊಲೀಸರು ದಂಡ ಹಾಕಿದ್ದಾರೆ. ಟ್ರಾಫಿಕ್​ ಪೊಲೀಸರು ಅವರ ಕೆಲಸ ಮಾಡಿದ್ದಾರೆ ಎಂದು ನಟ ವಿವೇಕ್​ ಒಬೆರಾಯ್​ ಹೇಳಿದ್ದಾರೆ.

ಮುಂಬೈ ಪೊಲೀಸರಿಗೆ ಧನ್ಯವಾದಗಳನ್ನ ಸಮರ್ಪಿಸುತ್ತೇನೆ. ಅವರು ಸುರಕ್ಷತೆ ಬಹಳ ಮುಖ್ಯ ಎಂಬುದನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆ ವಿವೇಕ್​ ಸುರಕ್ಷಿತವಾಗಿರಿ, ಮಾಸ್ಕ್​ ಧರಿಸಿ, ಹೆಲ್ಮೆಟ್​ ಹಾಕಿ ಎಂದು ಟ್ವೀಟ್​ ಮಾಡಿದ್ದಾರೆ.

ನಿನ್ನೆ ವಿವೇಕ್​ ಪತ್ನಿ ಪ್ರಿಯಾಂಕಾ ಜತೆ ಹರ್ಲೆ ಡೇವಿಡ್ಸನ್​ ಬೈಕ್​ನಲ್ಲಿ ಮಾಸ್ಕ್​ ಹಾಗೂ ಹೆಲ್ಮೆಟ್​ ಇಲ್ಲದೇ ಪ್ರಯಾಣ ಮಾಡುತ್ತಿದ್ದರು. ಇದನ್ನು ಗಮನಿಸಿದ ಟ್ರಾಫಿಕ್​ ಪೊಲೀಸರು​ 500 ರೂ ದಂಡ ವಿಧಿಸಿದ್ದರು. ಈ ಹಿನ್ನೆಯ ನಟ ವಿವೇಕ್​ ಒಬೆರಾಯ್​ ಈ ಪ್ರತಿಕ್ರಿಯೆ ನೀಡಿದ್ದಾರೆ.

ABOUT THE AUTHOR

...view details