ಮುಂಬೈ:ಮಹಾರಾಷ್ಟ್ರದಲ್ಲಿ ಇಂದಿನಿಂದ ಧಾರ್ಮಿಕ ಸ್ಥಳಗಳನ್ನು ಓಪನ್ ಮಾಡಿದ್ದಾರೆ. ಶಿರಡಿ ಸಾಯಿಬಾಬಾ, ಸಿದ್ಧಿ ವಿನಾಯಕ ಮತ್ತು ಪಂಡರಾಪುರದ ಪಾಂಡುರಂಗ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳು ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆದಿವೆ.
ಭಕ್ತರಿಗೆ ದರ್ಶನ ನೀಡಲು ಸಾಯಿಬಾಬಾ ಮಂದಿರ ಓಪನ್: ಪಾಂಡುರಂಗ, ಸಿದ್ಧಿ ವಿನಾಯಕನೂ ಈಗ ಮುಕ್ತ ಮುಕ್ತ! - ಭಕ್ತರ ದರ್ಶನಕ್ಕೆ ಬಾಗಿಲು ತೆರೆದ ಪಂಡರಾಪುರದ ಪಾಂಡುರಂಗ,
ಇಂದಿನಿಂದ ಮಹಾರಾಷ್ಟ್ರದಲ್ಲಿ ಭಕ್ತರಿಗೆ ಕೋವಿಡ್ ನಿಯಮದಂತೆ ಶಿರಡಿ ಸಾಯಿಬಾಬಾ, ಸಿದ್ಧಿ ವಿನಾಯಕ ಮತ್ತು ಪಾಡುರಂಗ ದೇವಾಲಯಗಳು ಸೇರಿದಂತೆ ಅನೇಕ ದೇವಸ್ಥಾನಗಳು ಬಾಗಿಲು ತೆರೆದಿವೆ.

ಭಕ್ತರಿಗೆ ದರ್ಶನ ನೀಡಲು ಬಾಗಿಲು ತೆರೆದ ದೇವಾಲಯಗಳು
ಇಂದಿನಿಂದ ಕೋವಿಡ್ ನಿಯಮದ ಪ್ರಕಾರ ಭಕ್ತರು ಸ್ಯಾನಿಟೈಸರ್, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ.
ಅದರಂತೆ ಶಿರಡಿ ಸಾಯಿಬಾಬಾ, ಸಿದ್ಧಿ ವಿನಾಯಕ ಮತ್ತು ಪಾಂಡುರಂಗ ದೇವಾಲಯಗಳು ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಾಗಿಲು ತೆರೆದಿದ್ದು, ಭಕ್ತಾದಿಗಳು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
Last Updated : Nov 16, 2020, 10:30 AM IST