ಕೊಟ್ಟಾಯಂ (ಕೇರಳ):ವಿಥುರ ಸೆಕ್ಸ್ ರಾಕೆಟ್ ಪ್ರಕರಣದಲ್ಲಿ 25 ವರ್ಷದ ಬಳಿಕ ಪ್ರಮುಖ ಆರೋಪಿಗೆ ಶಿಕ್ಷೆ ವಿಧಿಸಿ ಕೇರಳ ಕೋರ್ಟ್ ತೀರ್ಪು ಹೊರಡಿಸಿದೆ. ಎ1 ಆರೋಪಿ ಸುರೇಶ್ ಎಂಬಾತನಿಗೆ 24 ವರ್ಷಗಳ ಕಾಲ ಸಜೆ ವಿಧಿಸಿದ್ದು, 1 ಲಕ್ಷ 90 ಸಾವಿರ ರೂಪಾಯಿ ದಂಡವಿಧಿಸಲಾಗಿದೆ. ಆದರೆ, ಈಗಾಗಲೇ ಹಲವು ವರ್ಷ ಜೈಲಿನಲ್ಲೇ ಕಳೆದಿರುವ ಆತನಿಗೆ ಕೇವಲ 10 ವರ್ಷ ಜೈಲು ಶಿಕ್ಷೆ ನೀಡಬೇಕಿದೆ ಎಂದು ಕೋರ್ಟ್ ತಿಳಿಸಿದೆ.
ಬಾಲಕಿಯನ್ನು ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಆತನಿಗೆ 10 ವರ್ಷ ಜೈಲು 1 ಲಕ್ಷ ರೂ.ದಂಡ. ಅಪಹರಣಕ್ಕೆ 2 ವರ್ಷ ಜೈಲು 5 ಸಾವಿರ ದಂಡ ಮತ್ತು ವೇಶ್ಯಾವಾಟಿಕೆ ಕೇಂದ್ರ ನಡೆಸಿದ್ದಕ್ಕಾಗಿ ಎರಡು ಪ್ರಕರಣದಡಿ 12 ವರ್ಷಗಳ ಶಿಕ್ಷೆ ವಿಧಿಸಲಾಯಿತು.