ಅರಣ್ಯ ನಾಶವಾಗುವುದು ಹೆಚ್ಚಾದಂತೆ ಮಾನವ-ಪ್ರಾಣಿ ಸಂಘರ್ಷ ಸಹ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಂತೂ ಪ್ರತಿನಿತ್ಯ ಒಂದಿಲ್ಲೊಂದು ಪ್ರಾಣಿ ನಾಡಿಗೆ ಬರುವುದು ಸಾಮಾನ್ಯ ಎಂಬಂತಾಗಿದೆ. ಅಸ್ಸೋಂನಲ್ಲಿ ಆನೆಗಳ ಹಿಂಡೊಂದು ಜನರ ಮೇಲೆ ದಾಳಿಗೆ ಮುಂದಾದ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಈ ಘಟನೆ ನಡೆದಿದ್ದು ರಂಗಪರ ಎಂಬ ಊರಿನಲ್ಲಿ. ವ್ಯಕ್ತಿಯೋರ್ವ ಮೃತಪಟ್ಟ ಹಿನ್ನೆಲೆ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದರು. ಈ ವೇಳೆ ಮುಂದೆ ಆನೆಗಳ ಹಿಂಡನ್ನು ಕಂಡ ಜನ ದಂಗಾಗಿದ್ದಾರೆ.