ಮುಂಬೈ, ಮಹಾರಾಷ್ಟ್ರ: ನಗರದ ವಿಮಾನ ನಿಲ್ದಾಣದಲ್ಲಿ ಸಂಭವಿಸಬೇಕಾಗಿದ್ದ ಭಾರಿ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಮಂಗಳವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಲು ಹೊರಟಿದ್ದ ಏರ್ ವಿಸ್ತಾರಾ ಏರ್‌ಲೈನ್ಸ್ ವಿಮಾನಕ್ಕೆ ಲಗೇಜ್ ಟ್ರಕ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ವಿಮಾನದ ಇಂಜಿನ್ ಹಾನಿಯಾಗಿದೆ. ಅಪಘಾತದ ವೇಳೆ ವಿಮಾನದಲ್ಲಿ 140 ಪ್ರಯಾಣಿಕರಿದ್ದರು. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಎಂಜಿನ್‌ಗೆ ಡಿಕ್ಕಿ ಹೊಡೆದ ಲಗೇಜ್ ಟ್ರಕ್ ಮುಂಬೈ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಕ್ನ ಸಾಮಗ್ರಿಗಳನ್ನು ವಿಮಾನಕ್ಕೆ ಲೋಡ್ ಮಾಡುವಾಗ ಅಪಘಾತ ಸಂಭವಿಸಿದೆ. ಇದೇ ವೇಳೆ, ಚಾಲಕ ಯಡವಟ್ಟಿನಿಂದಾಗಿ ಟ್ರಕ್ನ ಹಿಂದಿನ ಭಾಗ ವಿಮಾನದ ಇಂಜಿನ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಎಲ್ಲ 140 ಪ್ರಯಾಣಿಕರು ವಿಮಾನದಲ್ಲಿದ್ದರು. ಈ ಅವಘಡ ಸಂಭವಿಸಿದಾಗ ವಿಮಾನ ಟೇಕ್ ಆಫ್ ಮಾಡಲು ಸಿದ್ಧತೆ ನಡೆಸಿತ್ತು ಎಂದು ವಿಸ್ತಾರ್ ಏರ್‌ಲೈನ್ಸ್‌ನ ಉದ್ಯೋಗಿಯೊಬ್ಬರು ಹೇಳಿದ್ದಾರೆ.
ವಿಮಾನ ಎಂಜಿನ್‌ಗೆ ಡಿಕ್ಕಿ ಹೊಡೆದ ಲಗೇಜ್ ಟ್ರಕ್ ಈ ಬಗ್ಗೆ ಅಧಿಕಾರಿಯೊಬ್ಬರು ಮಾತನಾಡಿ, ಮುಂಬೈನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದ ಇಂಜಿನ್ ರಿಪೇರಿ ಮಾಡಿರುವುದು ಬೆಳಕಿಗೆ ಬಂದಿದೆ. ಆಗಸ್ಟ್ 1 ರಂದು ಮುಂಬೈನಿಂದ ಕೋಲ್ಕತ್ತಾಗೆ ಹೊರಟಿದ್ದ ವಿಮಾನಕ್ಕೆ ಲಗೇಜ್ ಸಾಗಿಸುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ವಿಮಾನದ ಇಂಜಿನ್‌ಗೆ ಹಾನಿಯಾಗಿತ್ತು. ಕೂಡಲೇ ನಾವು ವಿಮಾನದ ಪ್ರಯಾಣಿಕರನ್ನು ಹೊರ ಕರೆತಂದೆವು. ಬಳಿಕ ನಾವು ಪ್ರಯಾಣಿಕರಿಗೆ ಪರ್ಯಾಯ ವಿಮಾನವನ್ನು ವ್ಯವಸ್ಥೆಗೊಳಿಸಿದ್ದೇವೆ ಮತ್ತು ಅವರನ್ನು ಅವರವರ ಸ್ಥಳಗಳಿಗೆ ಸ್ಥಳಾಂತರಿಸಿದ್ದೇವೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.
ಹೈಡ್ರಾಲಿಕ್ ಸಮಸ್ಯೆಯಿಂದ ಎಮರ್ಜೆನ್ಸಿ ಲ್ಯಾಂಡಿಂಗ್..: ಈ ವರ್ಷದ ಜನವರಿಯಲ್ಲಿ ಏರ್ ವಿಸ್ತಾರಾ ಯುಕೆ-781 ವಿಮಾನದಲ್ಲಿ ದೋಷವೊಂದು ಕಂಡು ಬಂದಿತ್ತು. ದೆಹಲಿಯಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಹೈಡ್ರಾಲಿಕ್ ಸಮಸ್ಯೆ ಕಾಣಿಸಿಕೊಂಡಿತ್ತು. ಎಚ್ಚೆತ್ತ ಡಿಜಿಸಿಎ ವಿಮಾನಕ್ಕೆ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಗೊಂಡಿದ್ದರು. ಅದರ ನಂತರ, ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಆದೇಶ ಹೊರಡಿಸಿದಾಗ, ಪೈಲಟ್‌ಗಳು ತಕ್ಷಣ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದರು. ವಿಮಾನದಲ್ಲಿ ಸುಮಾರು 140 ಪ್ರಯಾಣಿಕರಿದ್ದರು ಎಂದು ಡಿಜಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಓದಿ:ವಿಮಾನಯಾನ ವಲಯಕ್ಕೆ ಸಿಕ್ಕಿತು ಬೂಸ್ಟ್.. ದೇಶೀಯ ಪ್ರಯಾಣಿಕರ ದಟ್ಟಣೆ ದ್ವಿಗುಣ