ಶಿರಡಿ (ಮಹಾರಾಷ್ಟ್ರ): ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಬರುವ ಭಕ್ತರು ಇನ್ನು ಮುಂದೆ ಕಡ್ಡಾಯವಾಗಿ ಸಭ್ಯ ಉಡುಪಿನೊಂದಿಗೆ ದರ್ಶನ ಪಡೆಯಬೇಕೆಂದು ಭಕ್ತರಲ್ಲಿ ಟ್ರಸ್ಟ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಮನವಿ ಮಾಡಿಕೊಂಡಿರುವ ಟ್ರಸ್ಟ್ ದರ್ಶನಕ್ಕೆ ಬರುವ ಭಕ್ತರು ಇತ್ತೀಚೆಗೆ ಜೀನ್ಸ್, ಟೀ-ಶರ್ಟ್ ಸೇರಿದಂತೆ ಆಧುನಿಕ ಉಡುಗೆಗಳೊಂದಿಗೆ ಆಗಮಿಸುತ್ತಿದ್ದರು. ಹಾಗಾಗಿ ಟ್ರಸ್ಟ್ ಅಧಿಕಾರಿಗಳು ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಶಿರಡಿ ಸಾಯಿ ಬಾಬಾ ದರ್ಶನ: ಷರತ್ತುಗಳು ಅನ್ವಯ
ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಭಾರತೀಯ ಉಡುಪನ್ನು ಕಡ್ಡಾಯಗೊಳಿಸಲಾಗಿದೆ. ಮಂದಿರಕ್ಕೆ ಪ್ರವೇಶಿಸುವಾಗ ಭಕ್ತರು ಆಕ್ಷೇಪಾರ್ಹ ಬಟ್ಟೆ ತೊಟ್ಟು ಆಗಮಿಸುತ್ತಿದ್ದಾರೆ. ಇದರಿಂದ ಕೆಲವು ಭಕ್ತರಲ್ಲಿ ಅನ್ಯತಾ ಭಾವನೆ ಮೂಡಬಾರದು ಎಂಬ ಉದ್ದೇಶದಿಂದ ಸುಸಂಸ್ಕೃತ ಉಡುಪನ್ನು ಧರಿಸುವಂತೆ ಸಾಯಿ ಟ್ರಸ್ಟ್ ಕಾರ್ಯನಿರ್ವಾಹಕ ಅಧಿಕಾರಿ ಕನ್ಹುರಾಜ್ ಬಾಗಟೆ ಕೋರಿದ್ದಾರೆ. ಇದು ಕೇವಲ ಮನವಿ ಅಷ್ಟೇ. ಪವಿತ್ರ ಸ್ಥಳ ಆಗಿದ್ದರಿಂದ ಭಾರತೀಯ ಉಡುಪಿನೊಂದಿಗೆ ದರ್ಶನ ನೀಡುವಂತೆ ಅವರು ಸಲಹೆ ನೀಡಿದ್ದಾರೆ.
ಸಾಯಿ ಟ್ರಸ್ಟ್ ಕಾರ್ಯನಿರ್ವಾಹಕ ಅಧಿಕಾರಿ ಕನ್ಹುರಾಜ್ ಬಾಗಟೆ ಇಂತಹದ್ದೊಂದು ಬೋರ್ಡ್ ಅನ್ನು ದೇವಸ್ಥಾನದ ಎದುರು ಹಾಕಲಾಗಿದೆ. ಆಕ್ಷೇಪಾರ್ಹ ಉಡುಪಿನೊಂದಿಗೆ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆ ಈ ಮನವಿ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಟ್ರಸ್ಟ್ ಅಧಿಕಾರಿಗಳ ಈ ಮನವಿಗೆ ಹಲವು ಭಕ್ತಾಧಿಗಳು ಸ್ವಾಗತಿಸಿದ್ದಾರೆ.