ಲಕ್ನೋ:ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮನ ಭವ್ಯ ಮಂದಿರಕ್ಕಾಗಿ ಈಗಾಗಲೇ ಲಕ್ಷಾಂತರ ಜನರು ತಮ್ಮ ಕೈಲಾದಷ್ಟು ಸಹಾಯ ಮಾಡ್ತಿದ್ದು, ಇದೀಗ ವಿಶ್ವ ಸಿಂಧಿ ಸೇವಾ ಸಂಗಮ ಕೂಡ ದೇಣಿಗೆ ನೀಡುತ್ತಿದೆ.
ಅಯೋಧ್ಯೆ ರಾಮ ಮಂದಿರ: 200 ಬೆಳ್ಳಿ ಇಟ್ಟಿಗೆ ನೀಡಲಿದೆ ವಿಶ್ವ ಸಿಂಧಿ ಸೇವಾ ಸಂಗಮ! - ವಿಶ್ವ ಸಿಂಧಿ ಸೇವಾ ಸಂಗಮ 200 ಇಟ್ಟಿಗೆ
ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ಕೋಟ್ಯಂತರ ರೂ. ಹರಿದು ಬರುತ್ತಿದ್ದು, ಇದರ ಬೆನ್ನಲ್ಲೇ ವಿಶ್ವ ಸಿಂಧಿ ಸೇವಾ ಸಂಗಮ 200 ಬೆಳ್ಳಿ ಇಟ್ಟಿಗೆ ನೀಡುವುದಾಗಿ ತಿಳಿಸಿದೆ.
Vishwa Sindhi Seva
ರಾಮ ಮಂದಿರ ನಿರ್ಮಾಣಕ್ಕಾಗಿ 200 ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆ ರೂಪದಲ್ಲಿ ನೀಡಲಿದ್ದು, ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ವಿಶ್ವ ಸಿಂಧಿ ಸೇವಾ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಿ ಮಹತ್ವದ ಘೋಷಣೆ ಮಾಡಿದೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ನಿಧಿ ಸಮರ್ಪಣಾ ಅಭಿಯಾನದ ಆರಂಭಿಸಿ, ಕೋಟ್ಯಂತರ ರೂ. ಹಣ ಸಂಗ್ರಹ ಮಾಡಲಾಗಿದೆ.