ಕರ್ನಾಟಕ

karnataka

ವಿಶಾಖಪಟ್ಟಣದಲ್ಲಿ ಎರಡೂ ಕಿವಿಗಳಿಲ್ಲದ ಮಗುವಿಗೆ ಜನ್ಮ ನೀಡಿದ ತಾಯಿ

By

Published : Mar 20, 2022, 3:43 PM IST

ಹೆಚ್ಚಾಗಿ ಆನುವಂಶಿಕ ದೋಷಗಳಿಂದ ಇಂತಹ ಸಮಸ್ಯೆಗಳಾಗುತ್ತವೆ. ಅಥವಾ ಗರ್ಭಿಣಿಯಾಗಿದ್ದಾಗ ಇತರ ಔಷಧಗಳನ್ನು ಸೇವಿಸುವುದರಿಂದ ಸಂಭವಿಸುತ್ತದೆ. ಆದರೆ, ಮಗುವಿನ ತಾಯಿ ಅಂತಹ ಔಷಧಗಳನ್ನೇನು ತಾನು ಸೇವಿಸಿಲ್ಲ ಎಂದು ಹೇಳಿದ್ದಾರೆ ಅಂತಾ ಮಕ್ಕಳ ತಜ್ಞೆ ಡಾ.ನೀರಜಾ ತಿಳಿಸಿದರು..

baby-born-without-ears
ಮೋಹನರಾವ್ ಮತ್ತು ನಾಗಮಣಿ ದಂಪತಿ ಹಾಗೂ ಮಗು

ವಿಶಾಖಪಟ್ಟಣ :ನಾವು ಸಾಮಾನ್ಯವಾಗಿ ಕಾಲುಗಳು ಅಥವಾ ಕೈಗಳಿಲ್ಲದೆ ಹುಟ್ಟಿದ ಮಗುವನ್ನು ನೋಡಿರುತ್ತೇವೆ. ಆದರೆ, ವಿಶಾಖಪಟ್ಟಣ ಜಿಲ್ಲೆಯ ಪಾಡೇರು ಎಂಬಲ್ಲಿ ತಾಯಿಯೊಬ್ಬಳು ಕಿವಿಗಳಿಲ್ಲದ ಮಗುವೊಂದಕ್ಕೆ ಜನ್ಮ ನೀಡಿದ್ದು, ವೈದ್ಯಲೋಕ ಅಚ್ಚರಿ ಪಡುವಂತಾಗಿದೆ.

ಮೋಹನರಾವ್ ಮತ್ತು ನಾಗಮಣಿ ದಂಪತಿ ಹಾಗೂ ಮಗು..

ವಿಶಾಖಪಟ್ಟಣಂ ಜಿಲ್ಲೆಯ ಪೆದಬಯಲು ಮಂಡಲದ ವನಬಂಗಿ ಗ್ರಾಮದ ಮೋಹನರಾವ್ ಮತ್ತು ನಾಗಮಣಿ ದಂಪತಿಗೆ ಎರಡೂ ಕಿವಿಗಳಿಲ್ಲದ ಗಂಡು ಮಗು ಜನಿಸಿದೆ. ನಾಗಮಣಿ ಅವರನ್ನು ಇದೇ 18ರಂದು ಪಾಡೇರು ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗಕ್ಕೆ ದಾಖಲಿಸಲಾಗಿತ್ತು. ಅದೇ ದಿನ ಸಂಜೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದಂಪತಿಗೆ ಇದು ಎರಡನೇ ಮಗುವಾಗಿದೆ. ಎರಡೂ ಕಿವಿಗಳಿಲ್ಲದ ಮಗುವನ್ನು ನೋಡಿ ತಂದೆ-ತಾಯಿಗಳಿಬ್ಬರೂ ರೋಧಿಸುತ್ತಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಮಗುವನ್ನು ವಿಶಾಖಪಟ್ಟಣದ ಕೆಜಿಎಚ್‌ಗೆ ಸ್ಥಳಾಂತರಿಸಲಾಗಿದೆ. ಇಂತಹ ಮಕ್ಕಳು ಜನಿಸುವುದು ತೀರಾ ಅಪರೂಪ ಎಂದು ಆಸ್ಪತ್ರೆ ಅಧೀಕ್ಷಕ ಶಂಕರ್ ಪ್ರಸಾದ್ ಹೇಳಿದರು.

ಕೆಜಿಎಚ್‌ನ ನವಜಾತ ಸಮಗ್ರ ವೈದ್ಯಕೀಯ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶಿಶುವೈದ್ಯರು, ಕೆಜಿಎಚ್ ಹಿರಿಯ ವೈದ್ಯರು ಮಗುವನ್ನು ಪರೀಕ್ಷಿಸುತ್ತಿದ್ದಾರೆ. ಮಗು ಹುಟ್ಟಿದಾಗ ಅಳದೇ ಇದ್ದ ಕಾರಣಕ್ಕೆ ನಮ್ಮಲ್ಲಿಗೆ ತಂದಿದ್ದಾರೆ.

ಹೆಚ್ಚಾಗಿ ಆನುವಂಶಿಕ ದೋಷಗಳಿಂದ ಇಂತಹ ಸಮಸ್ಯೆಗಳಾಗುತ್ತವೆ. ಅಥವಾ ಗರ್ಭಿಣಿಯಾಗಿದ್ದಾಗ ಇತರ ಔಷಧಗಳನ್ನು ಸೇವಿಸುವುದರಿಂದ ಸಂಭವಿಸುತ್ತದೆ. ಆದರೆ, ಮಗುವಿನ ತಾಯಿ ಅಂತಹ ಔಷಧಗಳನ್ನೇನು ತಾನು ಸೇವಿಸಿಲ್ಲ ಎಂದು ಹೇಳಿದ್ದಾರೆ ಅಂತಾ ಮಕ್ಕಳ ತಜ್ಞೆ ಡಾ.ನೀರಜಾ ತಿಳಿಸಿದರು.

For All Latest Updates

ABOUT THE AUTHOR

...view details