ಕರ್ನಾಟಕ

karnataka

ETV Bharat / bharat

ಪ್ರೀತಿ ಬಿಡದ ಮಗಳು... ಕೊಲೆಗೈದು ಶವದ ಮುಂದೆ ವಿಡಿಯೋ ಮಾಡಿ ತಂದೆ ಹೇಳಿದ್ದೇನು? - ಆಂಧ್ರಪ್ರದೇಶದ ವಿಶಾಖಪಟ್ಟಣ

ಪ್ರೀತಿಯಲ್ಲಿ ಬಿದ್ದಿದ್ದ ಅಪ್ರಾಪ್ತ ಮಗಳನ್ನು ತಂದೆಯೇ ಕೊಲೆ ಮಾಡಿ, ವಿಡಿಯೋ ಮಾಡಿರುವ ದಾರುಣ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

Visakhapatnam
Visakhapatnam

By

Published : Nov 5, 2022, 4:19 PM IST

Updated : Nov 5, 2022, 6:30 PM IST

ವಿಶಾಖಪಟ್ಟಣ: ತನ್ನ ಮಾತು ಪಾಲಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ತಂದೆ ತನ್ನ ಮಗಳ ಕೊಲೆ ಮಾಡಿದ್ದಾನೆ. ಬಳಿಕ ವಿಡಿಯೋ ಮಾಡಿ, ತಾನು ಮಾಡಿದ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ. ಈ ದಾರುಣ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ವಿಶಾಖಪಟ್ಟಣದ ನಿವಾಸಿ ವರಪ್ರಸಾದ್ ಕೊಲೆ ಮಾಡಿದ ಆರೋಪಿ.

ಕೊಲೆಗೆ ಕಾರಣ:10ನೇ ತರಗತಿ ಓದುತ್ತಿದ್ದ ಬಾಲಕಿಯು ಯುವಕನೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಈ ವಿಷಯ ತನ್ನ ತಂದೆಗೂ ಹೇಳಿದ್ದಳು. ಆದ್ರೆ ಇದಕ್ಕೆ ವರಪ್ರಸಾದ್ ಒಪ್ಪಿರಲಿಲ್ಲ. ಮತ್ತು ಯುವಕನ ಜೊತೆ ಅಡ್ಡಾಡದಂತೆ ತಾಕೀತು ಮಾಡಿದ್ದ. ಆದ್ರೂ ಕೂಡ ಬಾಲಕಿ ಪ್ರೀತಿ ಮುಂದುವರೆಸಿದ್ದಳು.

ಇದರಿಂದ ಕೋಪಗೊಂಡ ವರಪ್ರಸಾದ್, ತನ್ನ ಮಗಳು ತನ್ನ ಮಾತು ಕೇಳುತ್ತಿಲ್ಲ ಎಂದು ಕೊಲೆ ಮಾಡಿದ್ದಾನೆ. ಬಳಿಕ ಈ ಕೃತ್ಯವನ್ನ ಸಮರ್ಥಿಸಿಕೊಂಡಿದ್ದಾನೆ. 'ನನ್ನ ಮಗಳ ಜವಾಬ್ದಾರಿಯಿಂದ ಇರುತ್ತಾಳೆಂದು ನಿರೀಕ್ಷಿಸಿದ್ದೆ. ಆಕೆಗೆ ಒಳ್ಳೆಯ ಶಿಕ್ಷಣ ಕೊಟ್ಟು ಬೆಳೆಸಿದ್ದೆ. ಆಕೆಗೆ ಬಾಕ್ಸಿಂಗ್ ಇಷ್ಟ ಎಂದು ತರಬೇತಿಗೂ ಸೇರಿಸಿದ್ದೆ. ಆದ್ರೆ ಆಕೆ ಕೆಟ್ಟ ಯುವಕನೊಬ್ಬನನ್ನು ಪ್ರೀತಿ ಮಾಡಿದ್ದಳು. ನನ್ನ ಮಾತು ಕೇಳದಿದ್ದಕ್ಕೆ ಹಿರಿಯ ಮಗಳನ್ನು ಕೂಡ ದೂರು ಕಳಿಸಿದ್ದೇನೆ' ಎಂದು ಮಗಳ ಶವದ ಮುಂದೆಯೇ ತಂದೆ ವಿಡಿಯೋ ಮಾಡಿದ್ದಾನೆ.

ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆರೋಪಿಯ ಹಿರಿಯ ಮಗಳ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ವರಪ್ರಸಾದ್ ತನ್ನ ಹೆಂಡತಿಯಿಂದಲೂ ಬೇರೆಯಾಗಿದ್ದ ಎಂದು ತಿಳಿದುಬಂದಿದೆ.

(ಓದಿ: ಬೆಂಗಳೂರು: ಶಾಲೆಯಲ್ಲಿ ಆಟವಾಡುವಾಗ ಕುಸಿದು ಬಿದ್ದ ಬಾಲಕಿ ಅನುಮಾನಾಸ್ಪದ ಸಾವು)

Last Updated : Nov 5, 2022, 6:30 PM IST

ABOUT THE AUTHOR

...view details