ಕರ್ನಾಟಕ

karnataka

ETV Bharat / bharat

ಹೊಸ ವರ್ಷದ ಆಗಮನದಲ್ಲಿರುವ ಕನ್ಯಾ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು; ಕಾರಣ? - ಹೊಸ ವರ್ಷದ ರಾಶಿ ಭವಿಷ್ಯ

2022ರ ಹೊಸ ವರ್ಷದ ಆಗಮನದಲ್ಲಿರುವ ಕನ್ಯಾ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕಾರಣ, ನಿಮ್ಮ ವಿರೋಧಿಗಳು ನಿಮಗೆ ಈ ವರ್ಷ ಕಿರುಕುಳ ಕೊಡಲಿದ್ದು ಅದರಿಂದ ತಪ್ಪಿಸಿಕೊಳ್ಳಲು ಈ ಮಾರ್ಗ ಅನುಸರಿಸಿ.

Your 2022 Horoscope
Your 2022 Horoscope

By

Published : Dec 31, 2021, 6:18 PM IST

ಕನ್ಯಾ ರಾಶಿಯವರು ಸಾಕಷ್ಟು ಜಾಣ್ಮೆಯನ್ನು ಹೊಂದಿದ್ದು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವುದರಲ್ಲಿ ನಿಪುಣರು. ಗ್ರಹಗಳ ಸ್ಥಾನಗಳ ಪ್ರಕಾರ 2022ರಲ್ಲಿ ಹೆಚ್ಚಿನ ಸಮಯದಲ್ಲಿ ಅದೃಷ್ಟವು ನಿಮ್ಮ ಪರವಾಗಿ ಇರಲಿದೆ. ಹೀಗಾಗಿ ನೀವು ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಲಿದ್ದೀರಿ.

ನೀವು ದೂರದ ಊರುಗಳಿಗೆ ಪ್ರಯಾಣಿಸುವ ಸಾಧ್ಯತೆ ಇದ್ದು ನಿಮ್ಮ ಪಾಲಿಗೆ ಇದು ಹೊಸ ವೃದ್ಧಿಯನ್ನು ತಂದು ಕೊಡಲಿದೆ. ಏಪ್ರಿಲ್‌ ನಂತರ ಗುರುವು ಮೀನ ರಾಶಿಗೆ ಪ್ರವೇಶಿಸುವ ಕಾರಣ ನಿಮಗೆ ಶುಭ ಸುದ್ದಿ ದೊರೆಯಲಿದೆ. ಈ ಸಂದರ್ಭದಲ್ಲಿ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಬಾಂಧವ್ಯವು ತುಂಬಾ ಚೆನ್ನಾಗಿರಲಿದೆ. ಸಾಮಾನ್ಯ ಕೌಟುಂಬಿಕ ಜೀವನದತ್ತ ನಾವು ಗಮನ ಹರಿಸುವುದಾದರೆ, ಇಲ್ಲೂ ಪ್ರೀತಿ ಮತ್ತು ಆತ್ಮೀಯತೆ ನೆಲೆಸಲಿದೆ. ನೀವು ಇನ್ನೂ ಅವಿವಾಹಿತರಾಗಿದ್ದರೆ ಈ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೀರಿ.

ವಿದೇಶಕ್ಕೆ ಹೋಗಲು ಇಚ್ಛಿಸುವವರು 2022ರ ಮಾರ್ಚ್‌ - ಏಪ್ರಿಲ್‌ ತಿಂಗಳುಗಳಲ್ಲಿ ಹಾಗೂ ನಂತರ ಆಗಸ್ಟ್‌-ಸೆಪ್ಟೆಂಬರ್‌ ತಿಂಗಳುಗಳಲ್ಲಿ ಈ ಅವಕಾಶ ಪಡೆಯಬಹುದು. ನಿಮ್ಮ ಕೆಲವು ಮಿತ್ತರ ಬೆಂಬಲವನ್ನು ನೀವು ಪಡೆಯಬಹುದು. ಆದರೆ, ಕೆಲವು ಮಿತ್ರರ ಕುರಿತು ನೀವು ಸಮಸ್ಯೆಯನ್ನು ಎದುರಿಸಬಹುದು. ಅವರ ಜೊತೆಗಿನ ನಿಮ್ಮ ಸಂಬಂಧದಲ್ಲಿ ಕುಸಿತ ಉಂಟಾಗಲಿದೆ. ಏಪ್ರಿಲ್‌ ನಂತರದ ಕೆಲವು ತಿಂಗಳುಗಳಲ್ಲಿ ನಿಮ್ಮ ಕೆಲಸದ ಕುರಿತು ಒಂದಷ್ಟು ಕಾಳಜಿ ವಹಿಸಿ. ಏಕೆಂದರೆ ನೀವು ಮಾಡುವ ಸಣ್ಣ ತಪ್ಪು ಕೂಡಾ ನೀವು ಕೆಲಸ ಕಳೆದುಕೊಳ್ಳುವಂತೆ ಮಾಡಬಹುದು. ನಿಮ್ಮ ಹಿರಿಯರ ಮಾತನ್ನು ನೀವು ಪಾಲಿಸಬೇಕು. ಜೂನ್‌ ಮತ್ತು ಜುಲೈಯಲ್ಲಿ ನಿಮ್ಮ ಬುದ್ಧಿಮತ್ತೆಯು ವೇಗವಾಗಿ ಕೆಲಸ ಮಾಡಲಿದೆ.

ಇದರಿಂದಾಗಿ ಅತ್ಯಂತ ಕಷ್ಟದ ಕೆಲಸವನ್ನು ಸುಲಭವಾಗಿ ನೀವು ಬಗೆಹರಿಯಲಿದ್ದೀರಿ. ಇದು ಕಾರ್ಯಸ್ಥಳದಲ್ಲಿ ನಿಮಗೆ ಮೇಲುಗೈ ಒದಗಿಸಲಿದೆ. ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆಯೂ ಇದೆ. ಆದರೂ, ಮೇ ನಂತರ ನಿಮ್ಮ ವಿರೋಧಿಗಳ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಅವರು ಆಗಾಗ ನಿಮಗೆ ಕಿರುಕುಳ ನೀಡಬಹುದು. ನಿಮ್ಮ ಮನಸ್ಸು ಪುರಾತತ್ವಕ್ಕೆ ಸಂಬಂಧಿಸಿದ ವಿಷಯವನ್ನು ಅರಿತುಕೊಳ್ಳಲು ಮತ್ತು ಅರ್ಥೈಸಿಕೊಳ್ಳಲು ಆಸಕ್ತಿ ತೋರಲಿದೆ. ಇದರಿಂದಾಗಿ ಏನಾದರೂ ಹೊಸತನ್ನು ಕಲಿಯಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಮಕ್ಕಳ ಕುರಿತು ಒಂದಷ್ಟು ಕಳವಳವು ನಿಮ್ಮನ್ನು ಕಾಡಬಹುದು. ಈ ವರ್ಷ ಒಟ್ಟಾರೆ ನಿಮಗೆ ಸಾಮಾನ್ಯ ಫಲ ದೊರೆಯಲಿದೆ.

ಇದನ್ನೂ ಓದಿ: ಹೊಸ ವರ್ಷದ ಸಂಭ್ರಮದಲ್ಲಿರುವ ಮೇಷ ರಾಶಿಯವರು ಸದ್ಯದಲ್ಲೇ ಶುಭ ಸುದ್ದಿ ಆಲಿಸಲಿದ್ದೀರಿ!

ABOUT THE AUTHOR

...view details