ಮುಂಬೈ:ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಅರ್ಧಕ್ಕೆ ಮೊಟಕುಗೊಂಡಿದೆ. ಹೀಗಾಗಿ ಎಲ್ಲ ಪ್ಲೇಯರ್ಸ್ ಮನೆಗಳತ್ತ ಮುಖ ಮಾಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಬಯೋ ಬಬಲ್ನಿಂದ ಮನೆಗೆ ತೆರಳಿದ್ದು, ವಿಶ್ರಾಂತಿ ಪಡೆದುಕೊಳ್ಳುವ ಬದಲಿಗೆ ಕೋವಿಡ್ ಪರಿಹಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಮುಂಬೈನಲ್ಲಿ ಕೋವಿಡ್ ಪರಿಹಾರ ಕಾರ್ಯ ಆರಂಭಿಸಿರುವ ವಿರಾಟ್ ಕೊಹ್ಲಿ ಪೋಟೋವೊಂದನ್ನ ಇದೀಗ ಶಿವಸೇನೆ ಯುವ ವಿಭಾಗದ ಸದಸ್ಯ ರಾಹುಲ್ ಎನ್ ಕನಾಲ್ ಹಂಚಿಕೊಂಡಿದ್ದಾರೆ.
ನಮ್ಮ ಕ್ಯಾಪ್ಟನ್ ಭೇಟಿಯಾಗಿದ್ದು, ಅವರು ಕೋವಿಡ್ ಪರಿಹಾರಕ್ಕಾಗಿ ಕೆಲಸ ಪ್ರಾರಂಭಿಸಲಾಗಿದೆ. ಇದರ ಬಗ್ಗೆ ಗೌರವ ಮತ್ತು ಪ್ರೀತಿ ಇದೆ. ಈ ಕಾರ್ಯ ಹೊಗಳಲು ಯಾವುದೇ ಪದಗಳಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಭಾರತಕ್ಕೆ ಈಗಾಗಲೇ ಅನೇಕ ದೇಶಗಳು ಸಹಾಯ ಮಾಡ್ತಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ, ಪ್ಲೇಯರ್ಸ್ ಕೂಡ ತಮ್ಮ ಕೈಲಾದ ಸಹಾಯ ಮಾಡಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋವಿಡ್ ಹೋರಾಟದಲ್ಲಿ ಭಾಗಿ ಆಕ್ಸಿಜನ್ ನೀಡಲು ಮುಂದಾಗಿತ್ತು. ಜತೆಗೆ ಅದೇ ಉದ್ದೇಶದಿಂದ ಆರ್ಸಿಬಿ ಪ್ಲೇಯರ್ಸ್ ಬ್ಲೂ ಜರ್ಸಿ ಹಾಕಿಕೊಂಡು ಮೈದಾನಕ್ಕಿಳಿಯಲು ಮುಂದಾಗಿತ್ತು.