ತಿರುಪತಿ(ಆಂಧ್ರಪ್ರದೇಶ):ತಿರುಪತಿ ಜಿಲ್ಲೆಯ ಅನ್ನಮಯ್ಯ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್ಟೇಬಲ್, ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ನಂತರ ಆ ಕಾನ್ಸ್ಟೇಬಲ್ನನ್ನು ಅಮಾನತುಗೊಳಿಸಲಾಗಿದೆ.
ಲಾರಿ ಚಾಲಕನಿಗೆ ಬೂಟು ಕಾಲಿನಿಂದ ಒದ್ದ ಟ್ರಾಫಿಕ್ ಹೆಡ್ ಕಾನ್ಸ್ಟೆಬಲ್: ವೀಡಿಯೋ ವೈರಲ್ ಅನ್ನಮಯ್ಯ ವೃತ್ತದಲ್ಲಿ ನಿಯೋಜನೆಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ಟಿ. ಜಗದೀಶ್ ಕಿಶೋರ್ ರಸ್ತೆಬದಿಯಲ್ಲಿ ಕಿಶೋರ್ ಬಾಬು ಎಂಬ ವ್ಯಕ್ತಿಯನ್ನು ಬೂಟು ಕಾಲಿನಿಂದ ಒದೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಹೆಡ್ ಕಾನ್ಸ್ಟೆಬಲ್ ಜಗದೀಶ್ ಕಿಶೋರ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಡ್ಡರಸ್ತೆಯಲ್ಲಿ ಲಾರಿಯೊಂದು ಬಂದು ನಿಂತಿತ್ತು. ಹೆಡ್ ಕಾನ್ಸ್ಟೇಬಲ್ ಟ್ರಕ್ ಅನ್ನು ಬೇರೆ ಕಡೆ ತೆಗೆದುಕೊಂಡು ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಚಾಲಕ ಲಾರಿ ಚಲಾಯಿಸಲು ಯತ್ನಿಸುತ್ತಿದ್ದಾಗ ಮುಖ್ಯ ಪೇದೆ ಚಾಲಕನನ್ನು ಅಡ್ಡಗಟ್ಟಿ ಪಕ್ಕಕ್ಕೆ ಹೋಗುವಂತೆ ಆದೇಶಿಸಿದರು. ಇಬ್ಬರ ನಡುವೆ ವಾಗ್ವಾದ ನಡೆದು, ತಾಳ್ಮೆ ಕಳೆದುಕೊಂಡ ಪೊಲೀಸ್ ಬೂಟುಕಾಲಿನಿಂದ ಮೂರು ಬಾರಿ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಮೂವರ ವಿರುದ್ಧ ದೂರು ದಾಖಲು: ಮುಖ- ಮೂತಿ ನೋಡದೇ ಕ್ರಮ ಎಂದ ಪೊಲೀಸ್