ಕಡಲೂರು(ತಮಿಳುನಾಡು): ಸರ್ಕಾರಿ ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದು, ಶಾಲಾ ಕೊಠಡಿಯಲ್ಲೇ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಮಿಳುನಾಡಿನ ಕಡಲೂರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಂದನಾರ್ ಬಾಲಕರ ಫ್ರೌಢಶಾಲೆಯ ಶಿಕ್ಷಕ ಈ ರೀತಿಯಾಗಿ ನಡೆದುಕೊಂಡಿದ್ದು, ಶಾಲಾ ವಿದ್ಯಾರ್ಥಿಗಳನ್ನ ಕ್ರೂರವಾಗಿ ಥಳಿಸಿದ್ದಾನೆ. ಈ ಶಾಲೆಯಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳ ಮೇಲೆ ಶಾಲಾ ಶಿಕ್ಷಕನ ರಾಕ್ಷಸಿ ವರ್ತನೆ ಇದನ್ನೂ ಓದಿರಿ:ಗಡಿಯಲ್ಲಿ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದ್ರೆ, ಮತ್ತೊಂದು ಸರ್ಜಿಕಲ್ ಸ್ಟ್ರೈಕ್: ಪಾಕ್ಗೆ ಅಮಿತ್ ಶಾ ಎಚ್ಚರಿಕೆ
ಲಭ್ಯವಾಗಿರುವ ಮಾಹಿತಿ ಪ್ರಕಾರ 12ನೇ ತರಗತಿಯ ವಿದ್ಯಾರ್ಥಿಗಳಾದ ಸಂಜಯ್, ಅಜಯ್ ಕುಮಾರ್, ನೆಕ್ಸಾ ಬಾಲನ್, ಸುಚೀಂದ್ರನ್, ಸೂರ್ಯ ಹಾಗೂ ಚಂದ್ರು ಸರಿಯಾಗಿ ತರಗತಿಗೆ ಬಾರದ ಕಾರಣ ಶಿಕ್ಷಕರಾದ ಸುಬ್ರಮಣಿಯನ್ ಲಾಠಿಯಿಂದ ಹೊಡೆದಿದ್ದು, ಕಾಲಿನಿಂದ ಒದಿದ್ದಾರೆ. ಈ ಘಟನೆಯ ವಿಡಿಯೋ ತಮ್ಮ ಮೊಬೈಲ್ಗಳಲ್ಲಿ ರೆಕಾರ್ಡ್ ಮಾಡಿರುವ ಇತರ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಿಕ್ಷಕರನ್ನ ವಿಚಾರಣೆಗೊಳಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.